ಕೊರೋನಾ ಭವಿಷ್ಯ

ಕೊರೋನಾ ಭವಿಷ್ಯ

ಬೆಂಗಳೂರು : ಇಡೀ ಜಗತ್ತೆ  ತಲ್ಲಣ ಗೋಳಿಸಿದೆ ಮಾಹಾಮಾರಿ ಕೊರೋನಾ ಬಗ್ಗೆ  ನಿಮ್ಹಾನ್ಸ್​ ತಜ್ಞ ಪ್ರೊ. ಡಾ.ವಿ. ರವಿ ಅವರು ಭವಿಷ್ಯ ನೀಡಿದರು. ಕಳೆದೆರಡು ತಿಂಗಳುಗಳಿಂದ ಕೊರೋನಾ ಭಾರತ ಮಾತ್ರವಲ್ಲದೇ ಇಡೀ ವಿಶ್ವದ ನಿದ್ದೆಗೆಡಿಸಿದೆ.

ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿರುವ ಕೊರೋನಾ ಸೋಂಕಿನಿಂದ ಜನರು ಕಂಗಾಲಾಗಿ ಹೋಗಿದ್ದಾರೆ. ತಣ್ಣಗಿದ್ದ ಭಾರತದಲ್ಲಿ ಕೆಲ ಜನರಿಂದಾಗಿ ಏಕಾಏಕಿ ಬಿರುಗಾಳಿ ಎಬ್ಬಿಸಿರುವ ಕೊರೋನಾ ಸೋಂಕು ಏರುಗತಿಯಲ್ಲಿಯೇ ಸಾಗಿದ್ದು, ಅಧಿಕ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿರುವ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿಬಿಟ್ಟಿದೆ.

ವರ್ಷಾಂತ್ಯದವರೆಗೆ ಕೊರೋನಾ ಮಾರಿ ಯಾವ ರೀತಿ ಅವತಾರ ತೋರುತ್ತದೆ ಎನ್ನುವುದನ್ನು  ನಿಮ್ಹಾನ್ಸ್​ನ ನ್ಯೂರೋ ವೈರಾಲಜಿ ವಿಭಾಗದ ಹಿರಿಯ ಉಪನ್ಯಾಸಕರಾಗಿರುವ ಇವರು, ಸಾಕಷ್ಟು ಅಧ್ಯಯನದ ನಂತರ ಈ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಕೋವಿಡ್​-19 ಆರೋಗ್ಯ ಪಡೆಯ ನೋಡೆಲ್​ ಅಧಿಕಾರಿ ಕೂಡ ಹೌದು.

ಲಸಿಕೆಗೆ ಕಾಯಲೇಬೇಕು

ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ ಶೇ.3-4 ರಷ್ಟಿದೆ. ಆದರೆ, ಈಗಾಗಲೇ ಗುಜರಾತ್ ರಾಜ್ಯದಲ್ಲಿ ಶೇ.6ಕ್ಕೆ ತಲುಪಿದೆ. ಈ ಸೋಂಕಿನ ಲಸಿಕೆಗಾಗಿ 2021ರ ಮಾರ್ಚ್ ತಿಂಗಳವರೆಗೂ ನಾವು ಕಾಯಲೇಬೇಕಿದೆ. ಈ ಸೋಂಕಿನ ಜತೆ ಬದುಕುವುದನ್ನು ಜನರು ಕಲಿಯಲೇಬೇಕು. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದಿರುವ ಪ್ರೊ.ರವಿ, ಎಬೋಲಾ, ಸಾರ್ಸ್​ನಂತಹ ಡೆಡ್ಲಿ ವೈರಸ್ ಕೊರೋನಾ ಅಲ್ಲ, ಆದ್ದರಿಂದ ಎಚ್ಚರಿಕೆ ತುಂಬಾ ಅಗತ್ಯ. ಸರ್ಕಾರಗಳು ಹೇಳುವ ಸೂಚನೆಗಳನ್ನು ಪಾಲಿಸುವುದರ ಜತೆಗೆ ಆರೋಗ್ಯದ ಬಗ್ಗೆ ಸದಾ ಗಮನ ಹರಿಸುತ್ತಿರಬೇಕು ಎಂದಿದ್ದಾರೆ.

Related