ಕಮಲ್ ಸರ್ಕಾರ ಪತನ.!

ಕಮಲ್ ಸರ್ಕಾರ ಪತನ.!

ನವದೆಹಲಿ, ಮಾ.21 : ಒಂದೂವರೆ ವರ್ಷದ ಆಡಳಿತದ ಸಿಎಂ ಕಮಲನಾಥ್ ಸರ್ಕಾರಕ್ಕೆ ಬ್ರೇಕ್ ಬಿದ್ದಿದೆ. ಒಂದುವರೆ ವರ್ಷದ ಹಿಂದೆ ಮದ್ಯಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಇಡಿದಿತ್ತು. 15 ವರ್ಷಗಳ ಬಿಜೆಪಿ ಸರ್ಕಾರವನ್ನ ಕಿತ್ತೊಗೆದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಯನ್ನ ಸೋಲಿಸಿದ ಕಾಂಗ್ರೆಸ್ಗೆ ದೇಶದ ಬಿಜೆಪಿಯೇತರ ಪಕ್ಷಗಳು ನಾಯಕರು ಸಾಥ್ ಕೊಟ್ಟಿದ್ದರು.

ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ಹಿರಿಯ ನಾಯಕ ಕಮಲ್ನಾಥ್ ಪ್ರಮಾಣ ಸ್ವೀಕರಿಸಿದ್ದರು. ಮಧ್ಯ ಪ್ರದೇಶದ ವಿಧಾನಸಭೆಯಲ್ಲಿ 230 ಸದಸ್ಯರಲ್ಲಿ, ಕಾಂಗ್ರೆಸ್ 114 ಸೀಟು ಗೆದ್ದಿದ್ರೆ, ಬಿಜೆಪಿ 107 ಗೆದ್ದಿತ್ತು. ಪಕ್ಷೇತರರು ನಾಲ್ಕು, ಬಿಎಸ್ಪಿ 2 , ಎಸ್ಪಿ ಒಂದು ಕ್ಷೇತ್ರದಲ್ಲಿ ಗೆದ್ದಿದ್ದರು. ಸರ್ಕಾರ ರಚಿಸುವ ಬಹುಮತಕ್ಕೆ ಈ 116 ಸೀಟು ಬೇಕಿತ್ತು. ಕಾಂಗ್ರೆಸ್ 114 ಸೀಟು ಇದ್ದ ಕಾರಣ ಪಕ್ಷೇತರರು, ಬಿಎಸ್ಪಿ, ಎಸ್ಪಿ ಬೆಂಬಲ ಪಡೆದು ಸರ್ಕಾರ ರಚಿಸಿತ್ತು. ಒಟ್ಟು 121 ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ಹಿರಿಯ ನಾಯಕ ಕಮಲ್ನಾಥ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕಮಲ್ನಾಥ್ ಮಧ್ಯಪ್ರದೇಶ ಸಿಎಂ ಆಗಿ ಇಂದಿಗೆ ಒಂದು ವರ್ಷ ಮೂರು ತಿಂಗಳಾಗಿದೆ. 15 ತಿಂಗಳಲ್ಲೇ ಕಮಲ್ ನಾಥ್ ಸರ್ಕಾರ ಪತನವಾಗಿದೆ.

Related