ಗೌರೀಶ್ವರ ದೇವಾಲಯದ ಸೊಬಗು

  • In State
  • July 11, 2020
  • 495 Views
ಗೌರೀಶ್ವರ ದೇವಾಲಯದ ಸೊಬಗು

ಚಾಮರಾಜ ನಗರ : ಯಳಂದೂರಿನಲ್ಲಿ ಗೌರೀಶ್ವರ ದೇವಾಲಯ ಇದೆ. ಚಾಮರಾಜನಗರದ ದೇವಾಲಯದ ಸೊಬಗು ಹಲವು ಪ್ರವಾಸಿಗರನ್ನು ಆರ್ಕಷಿಸುತ್ತಿದೆ. ಕ್ರಿ.ಶ.1450ರಲ್ಲಿ ಪಡಿನಾಡಿನ ದೊರೆ ಸಿಂಗದೇವ ಭೂಪ ಕಟ್ಟಿಸಿದ ಎನ್ನಲಾಗಿದೆ.
ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯದ ಮಹಾದ್ವಾರ 12 ಅಡಿಗಳಷ್ಟು ಎತ್ತರವಿದೆ. ಸುಂದರವಾದ ಕಲ್ಲಿನ ಬಳೆಗಳು, ಬ್ರಹ್ಮ, ವಿಷ್ಣು, ಮಹೇಶ್ವರ, ದಕ್ಷಿಣಾಮೂರ್ತಿ ಭೈರವ, ವೀರಭದ್ರ, ಗೋಪಾಲರ ವಿಗ್ರಹಗಳನ್ನು ಮನೋಹರವಾಗಿ ಕೆತ್ತಲಾಗಿದೆ. ಈ ದೇವಾಲಯದ ಮುಂದಿರುವ ಬಳೆಮಂಟಪವನ್ನು 1654ರಲ್ಲಿ ಮುದ್ದುರಾಜನು ಇದನ್ನು ಕಟ್ಟಿಸಿದನು.

Related