ವಿದ್ಯುತ್ ತಂತಿ ತುಳಿದು ವೃದ್ಧೆ ಸಾವು

ವಿದ್ಯುತ್ ತಂತಿ ತುಳಿದು ವೃದ್ಧೆ ಸಾವು

ಕೊರಟಗೆರೆ :ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕಸಾಗ್ಗೆರೆ ಗ್ರಾಮ ವ್ಯಾಪ್ತಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವೃದ್ದೆ ಹಾಗೂ ಮೂರು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.  ಗೌರಮ್ಮ (೭೦) ಮೃತ ದುರ್ದೈವಿ. ಎಮ್ಮೆ ಮೇಯಿಸಲು ಹೋಗಿದ್ದಾಗ ಘಟನೆ ಸಂಭವಿಸಿದೆ.

ಜಮೀನಿನ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಕಳಚಿ ಎಮ್ಮೆಗಳ ಮೇಲೆ  ಬಿದ್ದಿದ್ದು , ಎಮ್ಮೆಗಳಿಗೆ ವಿದ್ಯುತ್ ತಗುಲಿ , ಅದನ್ನು ಗಮನಿಸದ ವೃದ್ದೆ ಅಲ್ಲಿ ಹೋದಾಗ ಅವಘಡ ಸಂಭವಿಸಿದೆ.  ಸ್ಥಳಕ್ಕೆ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಭೇಟಿ ನೀಡಿದ್ದು, ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related