ಟಿಕ್‌ಟಾಕ್ ಯುವಕ ಸಾವು

ಟಿಕ್‌ಟಾಕ್ ಯುವಕ ಸಾವು

ಕೊರಟಗೆರೆ : ತಮ್ಮಲ್ಲಿನ ಕಲೆಯನ್ನು ತೋರಿಸುವ ಸಲುವಾಗಿ ಹಲವು ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬ ಭೂಪ ಸಾವಿನ ಅನುಭವ ಪಡೆಯಲು ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ವಿಷ ಸೇವಿಸಿದ್ದಾನೆ.

ಕ್ರಿಮಿನಾಶಕ ಸೇವಿಸಿದ್ದ 26 ವರ್ಷದ ಧನಂಜಯ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 4 ತಿಂಗಳ ಹಿಂದಷ್ಟೇ ಧನಂಜಯ್ ಮದುವೆ ಮಾಡಿಕೊಂಡಿದ್ದನು. ಅಷ್ಟರಲ್ಲೇ ಸಾವಿನ ಅನುಭವ ಪಡೆಯುವ ಯತ್ನಕ್ಕೆ ಕೈಹಾಕಿ ಮೃತಪಟ್ಟಿದ್ದಾನೆ.

ಧನಂಜಯ್ ವಿಷ ಸೇವಿಸುವ ಮುನ್ನ ಟಿಕ್ ಟಾಕ್ ವಿಡಿಯೋದಲ್ಲಿ ಜೀವನದಲ್ಲಿ ಒಂದು ಸಲ ಸಾಯಬೇಕು. ಅದು ಹೇಗಿರುತ್ತದೆ ಎಂಬ ಅನುಭವ ಪಡೆಯಬೇಕು. ನಾನು ಸಾಯುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಅದನ್ನು ನೀವು ನೋಡಬೇಕು ಎಂದು ಹೇಳಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related