ಕೆರಗೋಡಿನ ಜನರ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ: ಎಚ್.ಡಿ.ಕೆ

ಕೆರಗೋಡಿನ ಜನರ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ: ಎಚ್.ಡಿ.ಕೆ

ಮಂಡ್ಯ: ನನ್ನ ಹೆಸರಿನಲ್ಲಿ ರಾಮನಿದ್ದಾನೆ. ನಾನು ಕೂಡ ರಾಮಭಕ್ತ ಎಂದರೆ ಸಾಲದು. ರಾಮನಲ್ಲಿರುವ ಗುಣಗಳನ್ನು ರೂಡಿಕೊಳ್ಳಬೇಕು ಮತ್ತು ರಾಮನನ್ನು ಸ್ಮರಿಸಿದರೆ ಮಾತ್ರ ರಾಮ ರಾಮಭಕ್ತನಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ನಾನು ಕೂಡ ರಾಮಭಕ್ತ. ನನಗೂ ನನಗೂ ರಾಮನ ಮೇಲೆ ಭಕ್ತಿ ಇದೆ ಎಂದರೆ ಸಾಲದು ಇದನ್ನು ಯಾರು ನಂಬೋದಿಲ್ಲ ಎಂದು ಹೇಳಿದರು.

ರಾಮಭಕ್ತರಿಗೆ, ಜನರ ಭಾವನೆಗಳಿಗೆ ನೋವುಂಟು ಮಾಡಿ ನಾನು ರಾಮಭಕ್ತ, ನನ್ನ ಹೆಸರಿನಲ್ಲೇ ರಾಮ ಇದೆ ಎಂದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು. ಕೆರಗೋಡಿನ ಜನರ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ. ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸಿದೆ. ಶಾಂತಿ-ಸೌಹಾರ್ದತೆ ನೆಲೆಸಿದ್ದ ಸ್ಥಳದಲ್ಲಿ ಅಶಾಂತಿಯನ್ನುಂಟುಮಾಡಿದೆ. ಸರ್ಕಾರದ ಉದ್ಧಟತನ, ಪೊಲೀಸರ ದೌರ್ಜನ್ಯದಿಂದ ಜನ ನೊಂದಿದ್ದಾರೆ ಎಂದರು.

ಅಮಾಯಕರ ಮೇಲೆ ಲಾಠಿ ಪ್ರಹಾರ ಸರ್ಕಾರದ ರಾಕ್ಷಸೀ ಸಂಸ್ಕೃತಿಯಾಗಿದೆ ಎಂದರು. ರಾಷ್ಟ್ರಧ್ವಜ, ನಾಡಧ್ವಜದ ಬಗ್ಗೆ ಕಾಂಗ್ರೆಸ್‌ನವರಿಗಿಂತಲೂ ಹೆಚ್ಚಿನ ಗೌರವ-ಮರ್ಯಾದೆ ನಮಗೂ ಇದೆ. ಅದೇ ರೀತಿ ಹನುಮ ಧ್ವಜದ ಬಗ್ಗೆಯೂ ಕಾಳಜಿ ಇದೆ. ಈ ಹೋರಾಟ ರಾಜಕೀಯಕ್ಕಾಗಿಯೂ ಅಲ್ಲ, ಸ್ವಾರ್ಥಕ್ಕಾಗಿ ನಡೆಯುತ್ತಿಲ್ಲ. ಇದು ಜನರ ಭಾವನೆಗಳ ಪರ ಹೋರಾಟ. ಹನುಮ ಧ್ವಜ ಮರುಸ್ಥಾಪನೆಯಾಗುವವರೆಗೂ ಇದು ಮುಂದುವರೆಯಬೇಕು ಎಂದು ಒತ್ತಾಯಿಸಿದರು.

 

Related