ಸ್ವಪಕ್ಷೀಯ ಶಾಸಕರ ಅಸಮಧಾನಕ್ಕೆ ಟಾನಿಕ್ ಕೊಡಲು ಮುಂದಾದ ಸಿಎಂ

ಸ್ವಪಕ್ಷೀಯ ಶಾಸಕರ ಅಸಮಧಾನಕ್ಕೆ ಟಾನಿಕ್ ಕೊಡಲು ಮುಂದಾದ ಸಿಎಂ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವಿನಾಭಿಪ್ರಾಯಗಳು ಮೂಡುತ್ತಿದೆ ಎಂದು ಕೇಳಿ ಬರುತ್ತಿತ್ತು. ಇದನ್ನು ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶಾಸಕರ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಹೌದು ಇಂದಿನಿಂದ ಮೂರು ಜಿಲ್ಲಾವಾರು ಶಾಸಕರ ಸಭೆಯನ್ನು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಅಳಲನ್ನು ಆಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸ್ವಪಕ್ಷೀಯ ಶಾಸಕರ ಅಸಮಧಾನಕ್ಕೆ ಟಾನಿಕ್ ಕೊಡಲು ಮುಂದಾಗಿದ್ದಾರೆ. ಇಂದಿನಿಂದ 3 ದಿನಗಳ ಕಾಲ ಜಿಲ್ಲಾವಾರು ಶಾಸಕರ ಜೊತೆಗಿನ ಸಭೆ ಆರಂಭವಾಗಿದೆ. ಸಭೆಯಲ್ಲಿ ಶಾಸಕ ಸಮಸ್ಯೆ ಆಲಿಸುವ ಮೂಲಕ, ಮುನಿಸು ಶಮನಕ್ಕೆ ಸಿಎಂ, ಡಿಸಿಎಂ ಮುಂದಾಗಿದ್ದಾರೆ.

ಸಚಿವರ ದುರ್ವತನೆ ಹಾಗೂ ವರ್ಗಾವಣೆ ವಿಚಾರದಲ್ಲಿ ಮೂರನೇ ವ್ಯಕ್ತಿಗಳಿಂದ ಹಣಕ್ಕೆ ಬೇಡಿಕೆ.. ಹೀಗೆ ಹಲವು ವಿಚಾರಗಳನ್ನ ಉಲ್ಲೇಖ ಮಾಡಿ, ಸ್ವಪಕ್ಷೀಯರ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಸರ್ಕಾರ ರಚನೆಯಾಗಿ ಕೇವಲ ಎರಡೇ ತಿಂಗಳಿಗೆ ಸಚಿವರ ವಿರುದ್ದ , 30ಕ್ಕೂ ಹೆಚ್ಚು ಶಾಸಕರು ಪತ್ರ ಸಮರ ಸಾರಿದ್ದರು. ಇದು ಸಿದ್ದು ಸರ್ಕಾರಕ್ಕೆ ತೀವ್ರ ಮುಜುಗರ ತಂದಿತ್ತು. ಶಾಸಕರ ಅಸಮಧಾನ ಶಮನ ಮಾಡಲು, ಜಿಲ್ಲಾವರು ಶಾಸಕರ ಸಭೆ ಕರೆಯುತ್ತೇನೆಂದು, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಸಮಧಾನಿತ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ಇಂದಿನಿಂದ ಮೂರು ದಿನ ಜಿಲ್ಲಾವಾರು ಶಾಸಕರ ಸಭೆ ಕರೆದಿರುವ ಸಿಎಂ,ಶಾಸಕರ ಸಿಟ್ಟು ತಣ್ಣಗಾಗಿಸಲು ಕಸರತ್ತು ಆರಂಭಿಸಿದ್ದಾರೆ.

 

 

Related