ಮಡಿವಾಳ ಸಮಾಜದ ತಾಲೂಕಾಧ್ಯಕ್ಷರ ಆಯ್ಕೆ

ಮಡಿವಾಳ ಸಮಾಜದ ತಾಲೂಕಾಧ್ಯಕ್ಷರ ಆಯ್ಕೆ

ಜೇವರ್ಗಿ :  ನೂತನ ಯಡ್ರಾಮಿ ತಾಲೂಕಿನಲ್ಲಿ ತಾಲೂಕು ಮಡಿವಾಳ ಸಂಘದ ವತಿಯಿಂದ, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಪದಗ್ರಹ ಸಮಾರಂಭ ಪಟ್ಟಣದ ಸುಂಬಡ ರಸ್ತೆಯಲ್ಲಿರುವ ಕಡಕೋಳ ಮಠದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕಡಕೋಳ ಮಠದ ಪೀಠಾಧಿಪತಿಗಳಾದ ರುದ್ರಮುನಿ ಶಿವಾಚಾರ್ಯರು ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ಈ ವೇಳೆ ಯಡ್ರಾಮಿ ತಾಲೂಕು ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಬಿ. ಮಡಿವಾಳ ಕುಳಗೇರಿ, ಗೌರವಾಧ್ಯಕ್ಷರಾಗಿ ಚಂದ್ರಶೇಖ ಮಡಿವಾಳ, ಉಪಾಧ್ಯಕ್ಷರಾಗಿ ಮಲ್ಲಣ್ಣ ಮಡಿವಾಳ, ಕಾರ್ಯದರ್ಶಿಯಾಗಿ ಮಹಾಂತೇಶ ಮಡಿವಾಳ, ಖಜಾಂಚಿಯಾಗಿ ಚಂದ್ರಶೇಖರ ಮಡಿವಾಳ, ಯಡ್ರಾಮಿ ನಗರ ಘಟಕ ಅಧ್ಯಕ್ಷರಾಗಿ ಮಡಿವಾಳಪ್ಪ ಯಡ್ರಾಮಿ, ಪ್ರ.ಕಾರ್ಯದರ್ಶಿಯಾಗಿ ದೇವಿಂದ್ರ ಮಂಗಳೂರ, ಸಂ. ಕಾರ್ಯದರ್ಶಿಯಾಗಿ ಶರಣು ಅರಳಗುಂಡಗಿ, ಸಂಚಾಲಕರಾಗಿ ಶಿವಕುಮಾರ ಇಜೇರಿ, ಪ್ರಸಂಚಾಲಕರಾಗಿ ಬಸವರಾಜ ನಾಗರಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಿಗರಹಳ್ಳಿ ಮಠದ ಸಿದ್ಧ ಕಬೀರಾನಂದ ಮಹಾಸ್ವಾಮಿಗಳು, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ವಿಠ್ಠಲ ಮಡಿವಾಳ ಸೇರಿದಂತೆ ಜಿಲ್ಲೆ, ತಾಲೂಕು ಮತ್ತು ಪ್ರತಿಯೊಂದು ಹಳ್ಳಿಗಳ ಸಮಾಜದ ಮುಖಂಡರು, ಹಿರಿಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related