ಜಿಲ್ಲೆಯಲ್ಲೂ ಈಗ ‘ಹಕ್ಕಿ ಜ್ವರ’ದ ಭೀತಿ

ಜಿಲ್ಲೆಯಲ್ಲೂ ಈಗ ‘ಹಕ್ಕಿ ಜ್ವರ’ದ ಭೀತಿ

ಗದಗ : ದೇಶದ ವಿವಿಧ ರಾಜ್ಯಗಳಲ್ಲಿ  ಕಾಣಿಸಿಕೊಂಡಿರುವಂತ  ಹಕ್ಕಿ ಜ್ವರ ಸದ್ಯಕ್ಕೆ ರಾಜ್ಯದಲ್ಲಿ ದೃಢಪಟ್ಟಿಲ್ಲ. ಇದರ ಮಧ್ಯೆ ಜಿಲ್ಲೆಯಲ್ಲಿ ಕಾಗೆಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಜಿಲ್ಲೆಯ ಜನರಲ್ಲಿ ಹಕ್ಕಿ ಜ್ವರ ಭೀತಿಯನ್ನು ಹುಟ್ಟು ಹಾಕಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಕಾಗೆಗಳು ನಿಗೂಢವಾಗಿ ಸಾವನ್ನಪ್ಪಿವೆ.

ಕಾಗೆಗಳು ಸತ್ತು ಬಿದ್ದಿರುವಂತ ಮಂಡರಗಿ ತಾಲೂಕಿನ ಡಂಬಳ ಗ್ರಾಮಕ್ಕೆ ಪಶು ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ, ಕಾಗೆಗಳ ಗಂಟಲು ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ನಂತ್ರವೇ ಹಕ್ಕಿ ಜ್ವರದ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿಯಲಿದೆ.

Related