ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ನಟ

ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ನಟ

ಬೆಂಗಳೂರು: ಇಂದಿನ ಕಾಲದಲ್ಲಿ ಮದುವೆ ಮತ್ತು ಎಂಗೇಜ್ಮೆಂಟ್ ಎಂದರೆ ಅದು ಒಂದು ದೊಡ್ಡ ಸಂಭ್ರಮದಿಂದ ಆಚರಿಸಬೇಕೆಂದು ಎಲ್ಲರೂ ತೀರ್ಮಾನಿಸುತ್ತಾರೆ. ಆದರೆ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಅವರು ತಮ್ಮ ನಿಶ್ಚಿತಾರ್ಥವನ್ನು ಸಿಂಪಲ್ಲಾಗಿ ಮಾಡಿಕೊಂಡಿದ್ದಾರೆ.

ಹೌದು, ಒಳ್ಳೆ ಹುಡುಗ ಪ್ರಥಮ ಅವರು ಅವರ ನಿಶ್ಚಿತಾರ್ಥವನ್ನು ಸಾಧಾರಣವಾಗಿ ಆಚರಿಸಿಕೊಂಡಿದ್ದಾರೆ. ಕನ್ನಡ ಬಿಗ್ ಬಾಸ್ ಸೀಸನ್ 4ರ ವಿಜೇತ, ನಟ ಒಳ್ಳೆ ಹುಡ್ಗ ಪ್ರಥಮ್ ಸದ್ದು-ಗದ್ದಲವಿಲ್ಲದೆ, ಆಡಂಭರಗಳಿಲ್ಲದೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾವು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ತಾವು ಮದುವೆ ಆಗಲಿರುವ ಯುವತಿ ಯಾರೆಂಬುದನ್ನು ಮಾತ್ರ ಬಹಿರಂಗಗೊಳಿಸಿಲ್ಲ. ಕುಟುಂಬದವರ ಸಮ್ಮುಖದಲ್ಲಿ ಸಿಂಪಲ್ ಆಗಿ ಉಂಗುರ ಬದಲಿಸಿಕೊಂಡು ಎಂಗೇಜ್ಮೆಂಟ್ ಮಾಡಿಕೊಂಡಿರುವ ಒಳ್ಳೆ ಹುಡ್ಗ ಪ್ರಥಮ್, ತನ್ನನ್ನು ಇಷ್ಟ ಪಡುವವರು ಸಾಮಾಜಿಕ ಜಾಲತಾಣಗಳಲ್ಲೇ ಶುಭ ಹಾರೈಸಿ ಎಂದು ಹೇಳಿದ್ದಾರೆ.

Related