ಬಾಲಕಿಯ ಅಭ್ಯಾಸಕ್ಕೆ ಮಾರುಹೋದ ನಡಾಲ್

  • In Sports
  • September 30, 2020
  • 434 Views
ಬಾಲಕಿಯ ಅಭ್ಯಾಸಕ್ಕೆ ಮಾರುಹೋದ ನಡಾಲ್

ಜಗತ್ತಿನ ಸ್ಟಾರ್ ಟೆನಿಸ್ ತಾರೆ ರಫೆಲ್‍ನಡಾಲ್ ಕೇರಳದ ತಿರುವನಂತಪುರಂನ ಐದು ವರ್ಷದ ಬಾಲಕಿ ವಿವಿಕ್ತಾ ವಿಸಾಕ್ ಟೆನಿಸ್ ಅಭ್ಯಾಸಕ್ಕೆ ಮಾರು ಹೋಗಿದ್ದಾರೆ.

ವಿವಿಕ್ತಾ ವಿಸಾಕ್ ತನ್ನ ಟೆನಿಸ್ ಅಭ್ಯಾಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದರು. ಈ ವಿಡಿಯೋಗೆ ನಡಾಲ್ ಮತ್ತೊಂದು ವಿಡಿಯೋ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ “ಹಲೋ ವಿವಿಕ್ತಾ, ಹೇಗಿದ್ದೀರಾ? ನಿಮ್ಮ ಟೆನಿಸ್ ಸ್ಕಿಲ್ಸ್ ನೋಡುವುದು ನನಗೆ ತುಂಬಾ ಇಷ್ಟ. ನೀವು ಕೆಲವು ಉತ್ತಮ ಕೌಶಲ್ಯಗಳನ್ನು ಹೊಂದಿದ್ದೀರಿ ಮತ್ತು ನಿಮಗೆ ಕೇವಲ 5 ವರ್ಷ. ನಿಮ್ಮ ಈ ಕ್ರಿಯಾಶೀಲತೆಯನ್ನು ಬೆಂಬಲಿಸಲು ಮತ್ತಷ್ಟು ಪ್ರೇರೇಪಿಸಲು ಉಡುಗೊರೆಯನ್ನು ನೀಡಲು ಬಯಸುತ್ತೇನೆ. ಸುರಕ್ಷಿತವಾಗಿರಿ ಮತ್ತು ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇವೆ ಹೇಳಿದ್ದಾರೆ.

Related