ನಗರಸಭೆಗೆ ಹೇಳೋರು ಕೇಳೋರು ಇಲ್ವಾ?

ನಗರಸಭೆಗೆ ಹೇಳೋರು ಕೇಳೋರು ಇಲ್ವಾ?

ಕೊಪ್ಪಳ : ಗಂಗಾವತಿಯ ನಗರಸಭೆ ಆಧಿಕಾರಿಗಳಿಂದ ನಗರದಲ್ಲಿ ಸುಮಾರು 6 ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ನಗರಸಭೆಯವರಿಗೆ ಕೇಳಿದರೆ ಬೇಜವಾಬ್ದಾರಿತನದಿಂದ ಉತ್ತರ ಕೊಡುತ್ತಾರೆ.

ಕೊರೋನ ಆರ್ಭಟಿಸುತ್ತಿರುವ ಇಂತಹ ಸಂದರ್ಭದಲ್ಲಿ ಕುಡಿಯುವ ನೀರು ಬಂದ್ ಮಾಡಿದರೆ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ. ಬೇರೆ ನೀರು ಕುಡಿದರೆ ನೆಗಡಿ, ಕೆಮ್ಮು, ಮುಂತಾದ ಕಾಯಿಲೆಗಳಿಗೆ ತುತ್ತಾಗಿ ಸಾರ್ವಜನಿಕರು ಇನ್ನೂ ತೊಂದರೆ ಅನುಭವಿಸುತ್ತಾರೆ. ಹಾಗಾಗಿ ಮಳೆಗಾಲದಲ್ಲಿ ಜನರಿಗೆ ಕುಡಿಯುವ ನೀರು ಕೊಡದೆ ನಗರಸಭೆ ಬೇಜವಾಬ್ದಾರಿಯನ್ನು ತೋರಿಸುತ್ತದೆ.

ಒಂದು ವರ್ಷದಲ್ಲಿ ಎಷ್ಟು ಬಾರಿ ನಗರಸಭೆಯವರು ರಿಪೇರಿ ಮಾಡಿಸುತ್ತಾರೊ ಆ ದೇವರಿಗೆ ಗೊತ್ತು. ಹಬ್ಬ ಹರಿದಿನಗಳಲ್ಲಿ ಇಂತಹ ಎಡವಟ್ಟು ಕೆಲಸಗಳನ್ನು ನಗರಸಭೆ ಮಾಡುತ್ತಲೇ ಬಂದಿದೆ.

ಈ ನಗರಸಭೆಯವರಿಗೆ ಹೇಳುವವರು ಕೇಳುವವರು ಯಾರು ಇಲ್ಲಾ. ಇವರು ಆಡಿದ್ದೇ ಆಟವಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲಾಧಿಕಾರಿಗಳು ಸ್ವಲ್ಪ ಗಂಗಾವತಿಯ ನಗರಸಭೆ ಕಡೆ ಗಮನ ಕೊಡಬೇಕು. ಇಲ್ಲದಿದ್ರೆ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಪಂಪಣ್ಣ ಎಚ್ಚರಿಸಿದ್ದಾರೆ.

Related