ತಪಸ್ ಪಾಲ್ ವಿಧಿವಶ

ತಪಸ್ ಪಾಲ್ ವಿಧಿವಶ

ಮುಂಬೈ,ಕೊಲ್ಕತ್ತಾ, ಫೆ.18 : ಹಿರಿಯ ನಟ, ರಾಜಕಾರಣಿ ಮತ್ತು ತೃಣಮೂಲ ಕಾಂಗ್ರೆಸ್ನ ಮಾಜಿ ಸಂಸದ ತಪಸ್ ಪಾಲ್ ಹೃದಯಾಘಾತದಿಂದ ಇಂದು ಮುಂಜಾನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ನಿಧನರಾದರು. 61 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಮುಂಬೈಗೆ ತನ್ನ ಪುತ್ರಿಯ ಮನೆಗೆ ತೆರಳಿದ್ದ ಅವರು ಕೊಲ್ಕತ್ತಾಕ್ಕೆ ವಾಪಸ್ ಆಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿತು. ಜುಹುವಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ನಸುಕಿನಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Related