ತಮಿಳು ನಟ ವಿಕ್ರಮ್ ಗೆ ಹೃದಯಾಘಾತ..!!

  • In Crime
  • July 8, 2022
  • 213 Views
ತಮಿಳು ನಟ ವಿಕ್ರಮ್ ಗೆ ಹೃದಯಾಘಾತ..!!

ವಿಕ್ರಮ್​ಗೆ ಇನ್ನೂ 56ರ ಹರೆಯ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುವವರಿಗೆ ಈ ಸಮಸ್ಯೆ ಬಂದಿದ್ದು, ನಿಜಕ್ಕೂ ಆತಂಕಕಾರಿ. ವಿಕ್ರಮ್ ಅವರನ್ನು ಫಿಟ್​ ಆ್ಯಂಡ್​ ಫೈನ್​​ ನಟ ಎಂದು ಕರೆಯುತ್ತಿದ್ದರು.

ತಮಿಳು ನಟ ವಿಕ್ರಮ್​ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ. ಅದ್ಭುತ ನಟ ಎನಿಸಿಕೊಂಡಿರುವ ವಿಕ್ರಮ್ ಫಿಟ್ನೆಸ್​ ವಿಚಾರದಲ್ಲಿ ಎಲ್ಲರನ್ನೂ ಮೀರಿಸುವಂತಿದ್ದರು. ಅವರ ಲುಕ್ ಅಭಿಮಾನಿಗಳನ್ನು ಒಂದು ಕ್ಷಣ ದಂಗು ಬಡಿಸುವಂತಿರುತ್ತಾರೆ. ಆದರೆ ಅವರ ಈ ಫಿಟ್ನೆಸ್​ ಅವರಿಗೆ ಮುಳುವಾಯ್ತಾ ಎನ್ನುವ ಪ್ರಶ್ನೆ ಇದೀಗ ಹಲವಾರು ಜನರನ್ನು ಕಾಡುತ್ತಿದೆ.

ಹೌದು, 2015ರಲ್ಲಿ ಬಿಡುಗಡೆಯಾದ ಐ ಸಿನಿಮಾ ಎಲ್ಲರಿಗೂ ನೆನಪಿಸರಲೇಬೇಕು. ಅದರಲ್ಲಿನ ವಿಕ್ರಮ್ ಲುಕ್​ ಅನ್ನು ಯಾರೂ ಮರೆಯಲೂ ಸಾಧ್ಯವಿಲ್ಲ. ಆದರೆ ಆ ಸಮಯದಲ್ಲಿ ಅವರು ಕಷ್ಟಪಟ್ಟು ಮಾಡಿದ್ದ ಫಿಟ್ನೆಸ್ ತಂತ್ರಗಳು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು ನಾನು ದಿನಕ್ಕೆ 300 ಗ್ರಾಂ ಕ್ಯಾಲೋರಿ ಬರ್ನ್​ ಮಾಡುತ್ತಿದ್ದೆ.

ನಾನು ದಿನಕ್ಕೆ ಮೂರು ಬಾರಿ ವರ್ಕ್ ಔಟ್ ಮಾಡುತ್ತಿದ್ದೆ. ನಾನು ತಿನ್ನುವುದಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಿದ್ದೆ. ಅವರು ಎರಡೂವರೆ ವರ್ಷಗಳ ಕಾಲ ಇದೇ ರೀತಿಯ ಆಹಾರಕ್ರಮವನ್ನು ಮುಂದುವರೆಸಿದ್ದೆ ಎಂದಿದ್ದರು.

Related