ಮಳೆಹಾನಿಗೆ ಬಿದ್ದ ಸಂತ್ರಸ್ಥರಿಗೆ ತಹಶೀಲ್ದಾರ್ ಭೇಟಿ

ಮಳೆಹಾನಿಗೆ ಬಿದ್ದ ಸಂತ್ರಸ್ಥರಿಗೆ ತಹಶೀಲ್ದಾರ್ ಭೇಟಿ

ಕೊಟ್ಟೂರು : ಪುನರ್ವಸು ಮಳೆ ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೆಲವೊಂದು ಮನೆಗಳು ಭಾಗಶ: ಬಿದ್ದಿರುತ್ತವೆ. ಆದರೆ ಇದುವರೆಗೂ ಯಾವುದೇ ಜೀವಹಾನಿ, ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ. ಮನೆ ಹಾನಿಯಾಗಿರುವ ಗ್ರಾಮಗಳಿಗೆ ಭೇಟಿ ತಹಶೀಲ್ದಾರ್ ಜಿ. ಅನೀಲ್ ಕುಮಾರ್ ನೀಡಿದರು.

ಕೋಗಳಿ ಹೋಬಳಿಯ ಹೊನ್ನಿಹಳ್ಳಿ, ಕೊಟ್ಟೂರು ಹೋಬಳಿಯ ಚಿರಿಬಿ, ಸುಟ್ಟಕೋಡಿಹಳ್ಳಿ, ಕಾಳಾಪುರ, ತೂಲಹಳ್ಳಿ ಮತ್ತು ಹನುಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ. ಭಾಗಶ: ಮನೆಗಳು ಬಿದ್ದಿರುವ ಸಂತ್ರಸ್ಥರಿಗೆ ಸಾಂತ್ವನ ಹೇಳಿ, ನಿಯಮಾನುಸಾರ ಸರ್ಕಾರದಿಂದ ಬರುವ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ತಿಳಿಸುತ್ತಾ, ಪ್ರಕೃತಿ ವಿಕೋಪದ ಕಿಟ್‌ಗಳನ್ನು ಸಂತ್ರಸ್ಥರಿಗೆ ವಿತರಿಸಿದರು.

ಮಳೆಹಾನಿಯಿಂದ ಮನೆ/ಬೆಳೆ ಹಾನಿಯ ಬಗ್ಗೆ ಕೂಡಲೇ ಪಟ್ಟಿಯನ್ನು ಸಲ್ಲಿಸಲು ಸೂಚಿಸುತ್ತಾ, ಗ್ರಾಮ ಲೆಕ್ಕಿಗರಿಗೆ ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸವಾಗಿದ್ದು, ಕ್ಷಣ ಕ್ಷಣದವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ನಿರಿಕ್ಷಕರು ಹಾಲಸ್ವಾಮಿ, ಗ್ರಾಲೆಕ್ಕಾಧೀಕಾರಿಗಳು ಇನ್ನಿತರರಿದ್ದರು.

Related