ಪ್ರಸನ್ನತೆ ಕಳೆದುಕೊಂಡ ಸ್ವಾಮೀಜಿ: ವಾಲ್ಮೀಕಿ ಸಮುದಾಯದ ಆಕ್ರೋಶ

  • In State
  • August 16, 2023
  • 467 Views
ಪ್ರಸನ್ನತೆ ಕಳೆದುಕೊಂಡ ಸ್ವಾಮೀಜಿ: ವಾಲ್ಮೀಕಿ ಸಮುದಾಯದ ಆಕ್ರೋಶ

ಬೆಂಗಳೂರು: ಬೆಂಗಳೂರಿನ ಬಸವನಗುಡಿ ವಾಲ್ಮೀಕಿ ಆಶ್ರಮದಲ್ಲಿ ಇತ್ತೀಚೆಗೆ ನಡೆದ ಬಹಿರಂಗ ಸಭೆಯಲ್ಲಿ ರಾಜನಹಳ್ಳಿಯ ಪ್ರಸನ್ನಾನಂದಪುರಿ ಸ್ವಾಮೀಜಿ ಆಡಿದ ಅಶ್ಲೀಲ ಮಾತುಗಳಿಂದ ಇಡೀ ನಾಯಕ ಸಮುದಾಯ ಕೆಂಡವಾಗಿದೆ. ಈ ಹಿನ್ನೆಲೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಪೀಠದಿಂದ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸುತ್ತಿದೆ.

ಬಸವನಗುಡಿಯ ಆಶ್ರಮದಲ್ಲಿ ಪ್ರಸನ್ನಾನಂದಪುರಿ ಸ್ವಾಮೀಜಿಯೇ ಕರೆದಸಭೆಯಲ್ಲಿ ನಾಯಕ ಸಮುದಾಯದ ಯುವಕರಾದ ತುಳಸಿರಾಮ್ ಹಾಗೂ ಸಿಂಗಾಪುರ ವೆಂಕಟೇಶ್ ಎಂಬುವರು ಸ್ವಾಮೀಜಿ ರಾಜನಹಳ್ಳಿ ಮಠದಲ್ಲಿ ಅನ್ಯ ಸಮುದಾಯದ 9 ವ್ಯಕ್ತಿಗಳನ್ನು ಜೊತೆಗೆ ಇಟ್ಟುಕೊಂಡಿದ್ದಾರೆ. ಇದರಿಂದ ಮಠದ ಗೌಪ್ಯತೆಗೆ ಧಕ್ಕೆಯಾಗುತ್ತಿದೆ, ಸ್ವಾಮೀಜಿ ಖಾಸಗಿ ವಿಚಾರಗಳು ಹೊರಗೆ ಬರುತ್ತಿವೆ. ಹೀಗಾಗಿ ತಕ್ಷಣ ಅನ್ಯ ಸಮುದಾಯದ ವ್ಯಕ್ತಿಗಳನ್ನು ಕೆಲಸದಿಂದ ವಜಾಗೊಳಿಸಿ ಎಂದು ಆಗ್ರಹಿಸಿದ್ದರು. ಅದರಲ್ಲೀ ಪ್ರಮುಖವಾಗಿ ನಾಗರಾಜ್ ಎಂಬ ಡ್ರವೈರ್ ಇಡೀ ಮಠದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾನೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಪ್ರಸನ್ನಾನಂದಪುರಿ ಸ್ವಾಮೀಜಿ ತುಂಬಿದ ಸಭೆಯಲ್ಲಿಯೇ ಅವಾಚ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸಿ ತಮ್ಮನ್ನು ಪ್ರಶ್ನಿಸಿದವರನ್ನು ನಿಂದಿಸಿದ್ದಾರೆ. ಇದು ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸನ್ನಾನಂದಪುರಿ ಸ್ವಾಮೀಜಿ ಒಬ್ಬ ಸನ್ಯಾಸ ದೀಕ್ಷೆ ತೆಗೆದುಕೊಂಡವರು. ಅದರಲ್ಲೂ ಸಮುದಾಯದ ಹಿತಚಿಂತನೆಗಳ ಕಡೆಗೆ ಗಮನ ನೀಡಬೇಕು, ಧಾರ್ಮಿಕ ಕಾರ್ಯಗಳು, ವಾಲ್ಮೀಕಿ ಆಚಾರ ವಿಚಾರಗಳನ್ನು ಬಿತ್ತಬೇಕು. ಆದರೆ ಈ ಸ್ವಾಮೀಜಿ ತುಂಬಿದ ಸಭೆಯಲ್ಲಿ ಮಹಿಳೆಯರು ಮಕ್ಕಳು ಇರುವುದನ್ನೇ ಮರೆತು ಸೊಂಟದ ಕೆಳಗಿನ ಅಶ್ಲೀಲ ಪದಗಳನ್ನು ಬಳಸಿರುವುದು ಸರಿಯಲ್ಲ. ಇವರಿಗೆ ಸನ್ಯಾಸತ್ವದ ನಿಜವಾದ ಅರ್ಥವೇ ಗೊತ್ತಿಲ್ಲ. ಇವರ ಬಾಯಲ್ಲಿ ಸುಸಂಸ್ಕೃತ ಪದಗಳೇ ಬರುವುದಿಲ್ಲ. ಇಂತಹ ಸ್ವಾಮೀಜಿಯನ್ನು ವಾಲ್ಮೀಕಿ ಆಶ್ರಮದ ಪೀಠದಲ್ಲಿ ಕುಳ್ಳಿರಿಸಿರುವುದು ಸರಿಯಲ್ಲ. ತಕ್ಷಣ ರಾಜನಹಳ್ಳಿ ವಾಲ್ಮೀಕಿ  ಟ್ರಸ್ಟ್ ನ ಟ್ರಸ್ಟಿಗಳು ಸಭೆ ಸೇರಿ ಸ್ವಾಮೀಜಿ ಬದಲಾವಣೆಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದಾವಣಗೆರೆಯ ರಾಜನಹಳ್ಳಿ ಮಠಕ್ಕೆ ಹಲವು ಸಂಘಟನೆಗಳ ಮುಖಂಡರು ತೆರಳಿ ಅನ್ಯ ಸಮುದಾಯದ ಡ್ರೈವರ್ ನಾಗರಾಜ್ ಎಂಬಾತನನ್ನು ಕೆಲಸದಿಂದ ತೆಗೆಯಿರಿ ಎಂದು ಆಗ್ರಹಿಸಿದರೂ ಸಹ ಇದಕ್ಕೆ ಸ್ವಾಮೀಜಿ ಸ್ಪಂದಿಸುತ್ತಿಲ್ಲ.‌ ಪ್ರತಿವರ್ಷ ವಾಲ್ಮೀಕಿ ಮಠದಲ್ಲಿ ಈ ಸ್ವಾಮೀಜಿ ವಾಲ್ಮೀಕಿ ಹೆಸರಲ್ಲಿ ಜಾತ್ರೆ ಮಾಡುತ್ತಾರೆ. ಸರ್ಕಾರದಿಂದ ಈ ಜಾತ್ರೆ ಹೆಸರಿನಲ್ಲಿ ಎಸ್.ಸಿ.ಎಸ್.ಪಿ ಟಿ.ಎಸ್.ಪಿ ಅನುದಾನದಲ್ಲಿ 10 ರಿಂದ 12 ಕೋಟಿ ಹಣ ಪಡೆಯುತ್ಯಾರೆ. ಇದರ ಜೊತೆಗೆ ಇಡೀ ರಾಜ್ಯದ ನಾಯಕ ಅಥವಾ ವಾಲ್ಮೀಕಿ ಸಮುದಾಯದ ಜನರಿಂದ ದೇಣಿಗೆ ಸಂಗ್ರಹಿಸುತ್ತಾರೆ. ಆದರೆ ಇಷ್ಟೆಲ್ಲ ಸಂಗ್ರಹಿಸಿದ ಹಣ ಎಷ್ಟು? ಎಷ್ಟು ಹಣ ಖರ್ಚಾಯಿತು? ಯಾವ ಯಾವ ಜಿಲ್ಲೆ ಅಥವಾ ತಾಲೂಕುಗಳಿಂದ ಎಷ್ಟು ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ನೀಡದೆ ತಮ್ಮ ಸಂಬಂಧಿಕರ ಉದ್ದಾರ ಮಾಡುತ್ತಿದ್ದಾರೆ. ಮಠದ ಕೆಲವು ಆಸ್ತಿಗಳನ್ನೂ ತಮ್ಮ ಹೆಸರಿಗೆ ಮಾಡಿಕೊಂಡಿರುವ ಪ್ರಸನ್ನಾನಂದಪುರಿ ಸ್ವಾಮೀಜಿ, ಮಠಕ್ಕೆ ದಾನಿಗಳು ನೀಡಿದ ಬೆಳ್ಳಿ ಗದೆ, ಆಂಬ್ಯುಲೆನ್ಸ್ ಮುಂತಾದವುಗಳನ್ನೂ ಸಹ ಟ್ರಸ್ಟಿಗಳ ಹಾಗೂ ಸಮುದಾಯದ ಅನುಮತಿ ಇಲ್ಲದೆ ಮಾರಾಟ ಮಾಡಿದ್ದಾರೆ. ಮಾರಾಟ ಮಾಡಿದ ಹಣವನ್ನು ಸಹ ಮಠಕ್ಕೆ ಬಳಕೆ ಮಾಡಿಲ್ಲ ಎಂದು ಸಮುದಾಯದ ನಾಯಕರು ಗಂಭೀರವಾಗಿ ಆರೋಪಿಸಿದ್ದಾರೆ.

ರಾಜನಹಳ್ಳಿ ಮಠವು ಶ್ರೀ ಪುಣ್ಯಾನಂದಪುರಿ ಸ್ವಾಮೀಜಿಗಳು ಇದ್ದಾಗ ದೇವಸ್ಥಾ‌ದ ರೀತಿ ಇತ್ತು. ಆದರೆ ಚಿತ್ರದುರ್ಗದ ಮುರುಘಾ ಮಠದ ಶಿವಕುಮಾರ ಸ್ವಾಮೀಜಿಯ ಶಿಷ್ಯರಾದ ಪ್ರಸನ್ನಾನಂದಪುರಿ ಸ್ವಾಮೀಜಿ ಪೀಠಾರೋಹಣದ ಬಳಿಕ ಇದ್ದ ಒಂದು ಕಾಲೇಜು ಕೂಡ ಮುಚ್ಚಿ ಹೋಗಿದೆ. ಈ ಎಲ್ಲ ವಿಚಾರಗಳನ್ನು ಯಾರಾದರೂ ಕೇಳಿದರೆ ಪ್ರಸನ್ನಾನಂದಪುರಿ ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಜೊತೆಗೆ ತಮ್ಮ ಬೆಂಬಲಿಗರನ್ನು ಬಿಟ್ಟು ಬೆದರಿಕೆ ಹಾಕುವುದು, ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಬಿಸುವುದನ್ನು ಮಾಡುತ್ತಾರೆ. ಸುಳ್ಳು ಜಾತಿ ಪ್ತಮಾಣ ಪತ್ರ ಪಡೆದು ಅನೇಕರು ಇರುವ ಮೀಸಲಾತಿಯನ್ನೂ ಕಬಳಿಸುತ್ತಿದ್ದಾರೆ. ಇದರ ಬಗ್ಗೆ ಯಾರಾದರೂ ಧ್ವನಿ ಎತ್ತಿದರೆ ಅಂತವರಿಗೆ ಬೆದರಿಕೆ ಕರೆಗಳನ್ನು ಮಾಡಿಸುತ್ತಾರೆ ಎಂದು ವಕೀಲ ಮಲ್ಲಿಕಾರ್ಜುನ ಗುಮ್ಮೂರು ಆರೋಪಿಸಿದ್ದಾರೆ.

ಮಠವನ್ನು ಸೂಪರ್ ಸೀಡ್ ಮಾಡಿಸಲು ಈಗಾಗಲೇ ದಾವಣಗೆರೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವ ಇವರು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಈ ಹಿಂದೆ ಸಮಯದಾಯದ ಅನೇಕ ಯುವ ನಾಯಕರು, ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸಲು ಕುಮ್ಮಕ್ಕು ನೀಡಿರುವ ಪ್ರಸನ್ನಾನಂದಪುರಿ ಸ್ವಾಮೀಜಿ, ಮಠದಲ್ಲಿರುವ ಬೆರಳೆಣಿಕೆಯಷ್ಟು ಮಕ್ಕಳನ್ನು ಸಹ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆದ್ದರಿಂದ ಇವರನ್ನು ತಕ್ಷಣ ಮಠದ ಪೀಠದಿಂದ ಕೆಳಗಿಳಿಸಬೇಕು ಎಂದು ತುಳಸಿರಾಮ್, ಸಿಂಗಾಪುರ ವೆಂಕಟೇಶ್ ಸೇರಿದಂತೆ ಹಲವು ಮುಖಂಡರು ಆಗ್ರಹಿಸಿದ್ದಾರೆ.

 

Related