ನಾಳೆ ಸೂರ್ಯಗ್ರಹಣ ಸಾಕ್ಷಿಯಾಗಲಿದೆ

ನಾಳೆ ಸೂರ್ಯಗ್ರಹಣ ಸಾಕ್ಷಿಯಾಗಲಿದೆ

ಬೆಂಗಳೂರು: ಅಪರೂಪದ ಕಂಕಣ ಸೂರ್ಯಗ್ರಹಣ ಹಾಗೂ ಪಾರ್ಶ್ವ ಸೂರ್ಯಗ್ರಹಣ ಸುಮಾರು ಮೂರೂವರೆ ಗಂಟೆಗಳ ಕಾಲ ಸಂಭವಿಸಲಿದ್ದು, ನಭೋಮಂಡಲದಲ್ಲಿ ಸೃಷ್ಟಿಯಾಗಲಿರುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕ ಸೇರಿದಂತೆ ಉಳಿದ ಭಾಗಗಳಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ. ಸೂರ್ಯ-ಭೂಮಿ ನಡುವೆ ಚಂದ್ರನು ನೇರ ರೇಖೆಯಲ್ಲಿ ಹಾದು ಹೋಗದಿದ್ದಾಗ ಪಾರ್ಶ್ವ ಸೂರ್ಯಗ್ರಹಣ ಸಂಭವಿಸುತ್ತದೆ.

ಬೆಂಗಳೂರಿನಲ್ಲಿ ಪಾರ್ಶ್ವ ಸೂರ್ಯಗ್ರಹಣ ಭಾನುವಾರ ಬೆಳಿಗ್ಗೆ 10.13ಕ್ಕೆ ಆರಂಬವಾಗಿ ಮಧ್ಯಾಹ್ನ 1.32ಕ್ಕೆ ಮೋಕ್ಷವಾಗುತ್ತದೆ. ಮೈಸೂರಿನಲ್ಲಿ ಬೆಳಿಗ್ಗೆ 10.10ರಿಂದ 1.26ರವರೆಗೆ ಧಾರವಾಡದಲ್ಲಿ 10.04ರಿಂದ 1.28ರವರೆಗೆ, ಬೆಳಗಾವಿಯಲ್ಲಿ 10.03ರಿಂದ 1.27ರವರೆಗೆ, ಕಲಬುರಗಿಯಲ್ಲಿ 10.09ರಿಂದ 1.38ರವರೆಗೆ ಕಾಣಲಿದೆ.

 

Related