ನೂರಾರು ಅಭ್ಯರ್ಥಿಗಳ ಮಧ್ಯೆ ಹೊಡೆದಾಟ

ನೂರಾರು ಅಭ್ಯರ್ಥಿಗಳ ಮಧ್ಯೆ ಹೊಡೆದಾಟ

ಬೆಳಗಾವಿ : ಗ್ರಾ.ಪಂ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತ ಅಭ್ಯರ್ಥಿಗಳ ಮಧ್ಯೆ ಗಲಾಟೆಯಾಗಿ ಎರಡೂ ಕಡೆಯ ಅಭ್ಯರ್ಥಿಗಳ ನೂರಾರು ಬೆಂಬಲಿಗರ ಮಧ್ಯೆ ಗುಂಪು ಘರ್ಷಣೆ ಆಗಿರುವ ವಿಡಿಯೋ ವೈರಲ್ ಆಗಿದೆ.

ಸೋತ ಅಭ್ಯರ್ಥಿಯ ಹೊಲದಲ್ಲಿದ್ದ ಬೋರ್‌ವೆಲ್ ಅನ್ನು ಗೆದ್ದ ಅಭ್ಯರ್ಥಿ ಬಂದ್ ಮಾಡಿಸಿದ್ದರು. ಆಗ ಇಬ್ಬರ ಮಧ್ಯೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಮಹಿಳೆಯರು, ಪುರುಷರು, ಯುವಕರು ನೂರಾರು ಸಂಖ್ಯೆಯಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿದ್ದಾರೆ.

ಕೈಯಲ್ಕಿ ಸಿಕ್ಕ ಸಿಕ್ಕ ವಸ್ತುಗಳನ್ನು ಹಿಡಿದುಕೊಂಡು ಜಗಳವಾಡಿದ್ದಾರೆ. ಗಲಾಟೆ ನಡೆದು ಎರಡ್ಮೂರು ದಿನಗಳಾಗಿದ್ದು, ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟಪ್ರಭಾ ಠಾಣೆ ಪಿಎಸ್ ಐ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ.

Related