‘ಕೊವೀಡ್-೧೯ಬಗ್ಗೆ ಬೀದಿ ನಾಟಕ’

‘ಕೊವೀಡ್-೧೯ಬಗ್ಗೆ ಬೀದಿ ನಾಟಕ’

ಶಹಾಪುರ: ತಾಲೂಕಿನಾದ್ಯಂತ ಕೊವೀಡ್ ಲಸಿಕಾ ಕಾರಣದಿಂದ ಇಲ್ಲಿಯವರೆಗೂ ಅಡ್ಡಪರಿಣಾಮ ಆಗಿರುವ ಪ್ರಕರಣಗಳೇ ಇಲ್ಲ, ಸಣ್ಣ ಪುಟ್ಟ ಮೈ ಕೈ ನೋವು ಬರುವುದು ಸಹಜವಾಗಿದೆ ಎಂದು ಪೌರಾಯುಕ್ತ ರಮೇಶ್ ಪಟ್ಟೇದಾರ್ ಹೇಳಿದರು. ನಗರದ ಮೊಚಿಗಡ್ಡಾ ಹತ್ತೀರ ಹನುಮಾನ್ ದೇವಸ್ಥಾನದ ಆವರಣದಲ್ಲಿ ನಗರಸಭೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕೊವೀಡ್ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಕುರಿತು ಬೀದಿ ನಾಟಕ ಅಭಿಯಾನಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು ಲಸಿಕಾಕರಣಕ್ಕಾಗಿ ಸತತವಾಗಿ ಮೂರು ತಿಂಗಳುಗಳಿಂದ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಶ್ರಮಿಸುತ್ತಿದೆ. ಹಂತ ಹಂತವಾಗಿ ಲಸಿಕೆ ನೀಡುತ್ತಿದೆ.
ಅನೇಕ ಹಳ್ಳಿಯಲ್ಲಿ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಒಂದು ಸಲ ಕೊರೋನಾ ಬಂದು ವಾಸಿಯಾದರೆ ಮತ್ತೇ ಬರುವುದಿಲ್ಲ ಎಂದು ಆಲಕ್ಷೀಸಬಾರದು. ಲಸಿಕೆ ಸುರಕ್ಷತಾ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಜನರು ತಪ್ಪು ಕಲ್ಪನೆಗಳಿಂದ ಹೊರ ಬರಬೇಕು. ೧೮ ವರ್ಷ ಮೇಲ್ಪಟ್ಟವರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದ್ದು. ಪ್ರತಿಯೊಬ್ಬರು ಕೈಜೋಡಿಸಿ ಎಂದರು. ಲಸಿಕಾಕರಣಕ್ಕೆ ಭೀಮಾ ಜ್ಯೋತಿ ಕಲಾತಂಡ ಯರಗೋಳ ವತಿಯಿಂದ ಬೀದಿ ನಾಟಕ ಅಭಿಯಾನ ನಡೆಸಿ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಮುಖಂಡರಾದ ಮುಸ್ತಫ ದರ್ಬಾನ್, ದೇವಿಂದ್ರಪ್ಪ, ಟಿಎಚ್ಓ ಡಾ. ರಮೇಶ್ ಗುತ್ತೇದಾರ್, ದೇವಿಂದ್ರ ಹೇಗ್ಡೆ, ಡಾ. ನಂದಣ್ಣ ಪಾಟೀಲ್, ಸಣ್ಣ ನಿಂಗಣ್ಣ ನಾಯ್ಕೋಡಿ, ನಗರಸಭೆ ಸದಸ್ಯರುಗಳಾದ ಶಿವುಕುಮಾರ ತಳವಾರ, ಬಸವರಾಜ ಚೆನ್ನೂರು, ಅಪ್ಪಣ್ಣ ದಶವಂತ, ಅಂಬ್ಲಪ್ಪ ದ್ಯಾವಪೂರ್, ಮಹೇಶ್ ಮಡಿವಾಳಕರ್, ಶಾಂತಪ್ಪ ಕಟ್ಟಿಮನಿ, ದೇವಪ್ಪ ಗೋನಾಲ್, ದುರ್ಗಪ್ಪ ನಾಯಕ್, ನರಸಿಂಹ ಕುಲ್ಕರ್ಣಿ, ಅಕ್ಷರ ದಾಸೋಹ ಎಡಿ ಸೂರ್ಯವಂಶ, ಸೇರಿದಂತೆ ನಗರಸಭೆ ಸಿಬ್ಬಂದಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಇದ್ದರು.

Related