ಬಿರುಗಾಳಿ ಸಮೇತ ಮಳೆ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತಗಳ ಹೊಳೆ

ಬಿರುಗಾಳಿ ಸಮೇತ ಮಳೆ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತಗಳ ಹೊಳೆ

ಮೈಸೂರು; ಮೈಸೂರು ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೋಡಿ ಶೆಟ್ಟಿ ಗ್ರಾಮದಲ್ಲಿ ಬಿರುಗಾಳಿ ಸಮೇತ ಮಳೆ ಬೀಳುತ್ತಿರುವುದರಿಂದ ಹೈ ಟೆನ್ಶನ್ ವೈರ್ ಗಳು ಮೈಸೂರು ಮತ್ತು ಬೆಂಗಳೂರು ಹೆದ್ದಾರಿಯಲ್ಲಿ ಬಿದ್ದು ಈಗಾಗಲೇ ಸುಮಾರು ಅಪಘಾತಗಳಾಗಿದ್ದು ಅದರಲ್ಲಿ ವಾಹನ ಸಂಖ್ಯೆ KA 023M ಶಿಫ್ಟ್ ವಾಹನಕ್ಕೆ ಸರ್ಕಾರಿ ವಾಹನ ಸಂಖ್ಯೆKA09D8485 ಹಿಂದೆಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ದೊಡ್ಡ ಅಪಘಾತ ನಡೆದಿದ್ದು ಅದೃಷ್ಟ ವಶಾಂತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಹೌದು, ಏಪ್ರಿಲ್ 18ರಂದು ಗುರುವಾರ೦ ಸಂಜೆ ಸುಮಾರು 5:30ಕ್ಕೆ ಬಿರುಗಾಳಿ ಸಮೇತ ಮಳೆ ಬೀಳುತ್ತಿರುವುದರಿಂದ ಮೈಸೂರು ಮತ್ತು ಬೆಂಗಳೂರು ಹೆದ್ದಾರಿ ನಡುವೆ ಭೀಕರ ಅಪಘಾತಗಳು ನಡೆದಿದ್ದು ಹೆದ್ದಾರಿಗೆ ಹೈ ಟೆನ್ಶನ್ ವೈರು ಬಿದ್ದಿರುವುದರಿಂದ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.

ಇನ್ನು ಅಪಘಾತ ಸಂಭವಿಸಿದ ಕಾರಣ ಮೈಸೂರು ಮತ್ತು ಬೆಂಗಳೂರು ಹೆದ್ದಾರಿಯಲ್ಲಿ ಕಿಲೋಗಟಲೆ ಟ್ರಾಫಿಕ್ ಜಾಮ್ ಆಗಿದೆ. ಅಪಘಾತ ಸಂಭವಿಸಿರುವುದರಿಂದ ಕೋಡಿ ಶೆಟ್ಟಿ ಗ್ರಾಮದ ಸುತ್ತಮುತ್ತ ಆತಂಕ ಮನೆ ಮಾಡಿದೆ.

ಹೈ ಟೆನ್ಶನ್ ವೈರ್ ಗಳು ಹೆದ್ದಾರಿ ಮೇಲೆ ಬಿದ್ದಿರುವುದರಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ.

Related