ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಕನ್ನಡಿಗರ ಕಂಗಣ್ಣಿಗೆ ಗುರಿಯಾಗಿರುವ ನಟ ಕಮಲ್ ಹಾಸನ್ ವಿರುದ್ಧ ಈಗಾಗಲೇ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾವೆ.
ಕರ್ನಾಟಕ ರಾಜ್ಯದಲ್ಲಿ ಕಮಲ್ ಹಾಸನ್ ನಟನೆಯ ಸಿನಿಮಾಗಳು ಬಿಡುಗಡೆಯಾಗದು ಹಾಗೂ ಕರ್ನಾಟಕಕ್ಕೆ ಕಮಲ್ ಹಾಸನ್ ಬರಬಾರದು ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ವಾರ್ನಿಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಕಮಲ್ ಹಾಸನ್ ಅವರಿಗೆ ಸಮಯ ಕೊಟ್ಟು ನೋಡಿದೆವು ಆದರೆ ಅವರ ದುರಹಂಕಾರ ಕಡಿಮೆಯಾಗದೆ ಕ್ಷಮೆ ಕೇಳಿಲ್ಲ ಹಾಗಾಗಿ ಮಹಾಮೂರ್ಖ, ಅವಿವೇಕಿ ಕಮಲ್ ಹಾಸನ್ ಅಹಂಕಾರಕ್ಕೆ ಅಂತ್ಯ ಕಾಣಿಸುವ ನಿರ್ಧಾರವನ್ನು ನಾವು ಕೈಗೊಂಡಿದ್ದು ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯದಲ್ಲಿ ಕಮಲ್ ಹಾಸನ್ ನಟನೆಯ ಸಿನಿಮಾ ಹಾಗೂ ಕಮಲ್ ಹಾಸನ್ ಕರ್ನಾಟಕಕ್ಕೆ ಬಾರದಂತೆ ನಿರ್ಬಂಧ ಹೇರಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಗೆ ಹೈಕೋರ್ಟ್ ಜಡ್ಜ್ ತರಾಟೆಗೆ ತೆಗೆದುಕೊಂಡಿದ್ಯಾಕೆ?
