ಗುರಿ ಸಾಧನೆಗೆ ಪರಿಶ್ರಮ ಮುಖ್ಯ

ಗುರಿ ಸಾಧನೆಗೆ ಪರಿಶ್ರಮ ಮುಖ್ಯ

ಬಾದಾಮಿ: ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಗುರಿ ಸಾಧನೆ ಮಾಡಬೇಕು, ಗುರಿ ತಲುಪಲು ಭವಿಷ್ಯದಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹೆತ್ತವರಿಗೆ ಸಂಸ್ಥೆಗೆ ಕೀರ್ತಿ ತಂದು ನಾಡಿಗೆ ಕೊಡುಗೆ ನೀಡಬೇಕು ಎಂದು ಕೆಎಎಸ್ ಅಧಿಕಾರಿ ಮಹಾಂತೇಶ ಹಂಗರಗಿ ಹೇಳಿದರು.

ಅವರು ನಗರದ ತಾ.ಪಂ ಸಭಾ ಭವನದಲ್ಲಿ ಚಾಲುಕ್ಯ ಗುರುಕುಲ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಬನಶಂಕರಿ ಟ್ಯುಟೋರಿಯಲ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾವಂತರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನನಗೆ ಕೇವಲ ಪದವಿ ಪಡೆದು ಶಿಕ್ಷಕನಾದರೆ ಸಾಕು ಎಂದು ಕುಳಿತಾಗ ಶಿಕ್ಷಕರಾದ ಚಿದಾನಂದ ಬಂಡಿವಡ್ಡರ ಅವರು ನನಗೆ ಧಾರವಾಡದಲ್ಲಿ ಶಿಕ್ಷಣ ಮುಂದುವರೆಸಲು ಹೇಳಿದರು ಅವರ ಮಾರ್ಗದರ್ಶನ ಇಂದು ನನ್ನನ್ನು ಉನ್ನತ ಹುದ್ದೆಗೆ ಹೋಗುವಂತೆ ಮಾಡಿದೆ ನೀವು ಕೂಡಾ ಉನ್ನತ ಹುದ್ದೆ ಪಡೆಯಲು ಅವಕಾಶ ಇದ್ದು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿ ಎಂದು ಕರೆ ನೀಡಿದರು.

ಚಾಲುಕ್ಯ ಗುರುಕುಲ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ, ಬಿಆರ್‌ಪಿ ಸಂಗಮೇಶ ಯಲಿಗಾರ ಮಾತನಾಡಿದರು.

ತಾಲೂಕು ನೌಕರ ಸಂಘದ ಅಧ್ಯಕ್ಷ ರಮೇಶ ಅಥಣಿ, ಸಂಸ್ಥೆಯ ಮಾರ್ಗದರ್ಶಕ ಚಿದಾನಂದ ಬಂಡಿಬಮವಡ್ಡರ, ವಿರೇಶ ಹಿರೇಮಠ, ಮಹೇಶ ವಡ್ಡರ, ಪರಶುರಾಮ ನಸಬಿ, ಜಯಂತ ಮ್ಯಾಳಗಿಮನಿ, ನಾಗೇಶ ತಾಳಿಕೋಟಿ, ಪರಶುರಾಮ ನೀಲಗುಂದ, ಎಸ್.ಬಿ.ಹಳ್ಳೂರ, ಮುತ್ತು ಉಳ್ಳಾಗಡ್ಡಿ, ಬೇಲೂರಪ್ಪ ವಡ್ಡರ ಇದ್ದರು.

Related