ಬೆಂಗಳೂರು: ನಟ ಶ್ರೀನಗರ ಕಿಟ್ಟಿ ಯವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಚ್ಚು ಹೆಸರನ್ನು ಗಳಿಸಿರುವ ಅವರು ಇದೀಗ ವಿಭಿನ್ನ ಪಾತ್ರದ ಮೂಲಕ ಎಲ್ಲಾ ಅಭಿಮಾನಿಗಳನ್ನು ರಂಜಿಸಲು ತೆರೆ ಮೇಲೆ ಬರುತ್ತಿದ್ದಾರೆ.
ಹೌದು, ಜೋಗುತಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ತೆರೆ ಮೇಲೆ ಬರುತ್ತಿದ್ದು, ಪತ್ರಕರ್ತ ರವಿ ಬೆಳಗೇರಿ ಅವರ ಜೋಗತಿಯರ ಜೀವನದ ಆಗುಹೋಗುಗಳ ಬಗ್ಗೆ ಬರೆದಿರುವ ವೇಷಗಳು ಎಂಬ ಸಣ್ಣ ಕಥೆಯನಾದರಿಸಿ ಅದೇ ಹೆಸರಿನಲ್ಲಿ ಚಲನಚಿತ್ರ ಒಂದು ತಯಾರಾಗುತ್ತಿದೆ.
ಇನ್ನು ಶ್ರೀನಗರ ಕಿಟ್ಟಿಯವರಿಗೆ (ಮಂಗಳವಾರ ಜುಲೈ 9) ರಂದು ಹುಟ್ಟು ಹಬ್ಬದ ಸಂಭ್ರಮ. ಈ ಹುಟ್ಟು ಹಬ್ಬದ ಸಂಭ್ರಮದಂದೇ ವೇಷಗಳು ಎಂಬ ಸಿನಿಮಾದ ಟೀಸರ್ ಕೂಡ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಅವರು ಜೋಗವ್ವನ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ನ ಮತ್ತೊಂದು ಎಡವಟ್ಟು..!
ನಟ ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ 2 ಗೆಟಪ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈಗಾಗಲೇ ಶ್ರೀನಗರ ಕಿಟ್ಟಿ ಅವರು ಜೋಗತಿ ಪಾತ್ರಕ್ಕಾಗಿ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ ಅವರನ್ನು ಸಂಪರ್ಕಿಸಿ ಜೋಗತಿಯರ ನಡೆ, ನುಡಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡು ಸಿದ್ಧತೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಬಸಪ್ಪ ಪಾತ್ರವೇ ಬಹುತೇಕ ಆವರಿಸಿಕೊಂಡಿದೆ ಎಂದು ಚಿತ್ರ ತಂಡ ಹೇಳಿದೆ.
