ಕ್ರೀಡೆಗಳಿಂದ ದೈಹಿಕವಾಗಿ ಸದೃಢವಾಗಬಹುದು

  • In Sports
  • March 9, 2021
  • 436 Views
ಕ್ರೀಡೆಗಳಿಂದ ದೈಹಿಕವಾಗಿ ಸದೃಢವಾಗಬಹುದು

ಹನೂರು : ಕ್ರೀಡಗಳು ವ್ಯಕ್ತಿಯನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲಿದ್ದು ಯುವಕರು ಹಾಗೂ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆಗಳನ್ನು ಮಾಡಬೇಕೆಂದು ಸಲಹೆ ನೀಡಿದರು. ಕ್ರೀಡೆಗಳನ್ನು ಪ್ರೋತ್ಸಾಹಿಸಿ ಯುವಕರಲ್ಲಿ ಕ್ರೀಡಾ ಆಸಕ್ತಿ ಪ್ರೋತ್ಸಾಹಿಸಲು ಈ ಬಾರಿ ಶಿವರಾತ್ರಿ ಹಬ್ಬದ ಪ್ರಯುಕ್ತ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನ ಕೂಡಲೂರು ಗ್ರಾಮದಲ್ಲಿ ಓಬಳಿ ಕಲ್ಯಾಣ ಟ್ರಸ್ಟ್ ಹಾಗೂ ಓಬಳಿ ಸೌಹಾರ್ಧ ಸಹಕಾರ ಸಂಘದ ವತಿಯಿಂದ ಮಾಸ ಶಿವರಾತ್ರಿ ಹಬ್ಬದ ಪ್ರಯುಕ್ತ ಕೂಡಲೂರಿನ ಓಬಳಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ಎಸ್.ಗಂಗಾಧರ್ ಉದ್ಘಾಟಿಸಿ ಮಾತನಾಡಿದರು.

ಈ ಕ್ರೀಡಾ ಕೂಟಕ್ಕೆ ಹನೂರು ತಾಲೂಕಿನಾದಾದ್ಯಂತ ವಿವಿಧ ಕಬಡ್ಡಿ ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಓಬಳಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜಯಶೀಲರಾದರು. ಇವರಿಗೆ ೫ ಸಾವಿರ ನಗದು ಬಹುಮಾನ ಹಾಗೂ ಪದಕವನ್ನು ನೀಡಿ ಗೌರವಿಸಲಾಯಿತು.

ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ನೇಸರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಾದೇಶ್, ದೈಹಿಕ ಶಿಕ್ಷಕರಾದ ಗೋವಿಂದು, ಹೊಂಗಪ್ಪ,ಗುAಡ್ಲುಪೇಟೆ ಭರತ್, ಚಾಮರಾಜನಗರದ ತೀರ್ಪುಗಾರರಾದ ಮಲ್ಲೇಶ್, ಓಬಳಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಚೆಲುವರಾಜು,ಶರತ್ ಕುಮಾರ್, ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.

Related