ಗಣೇಶ ಹಬ್ಬದ ವಿಶೇಷತೆ

ಗಣೇಶ ಹಬ್ಬದ ವಿಶೇಷತೆ

ಉತ್ತರ ಕನ್ನಡ : ಕಾರವಾರದಲ್ಲಿ ಹಬ್ಬ ಅಂದ್ರೆ ಅದೇನೋ ಸಡಗರ, ಸಂಭ್ರಮ. ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿಗರಿಗೆ ಯಾವುದೇ ಹಬ್ಬ ಬಂದರೂ ಅವರಲ್ಲೇನೋ ವಿಶೇಷತೆ ಇದ್ದೇ ಇರುತ್ತೆ. ಈಗಂತೂ ಗೌರಿ-ಗಣೇಶ ಹಬ್ಬದ ಸಮಯ. ಈ ಹಬ್ಬಕ್ಕೆ ಮಲೆನಾಡ ಭಾಗವಾದ ಶಿರಸಿಯಲ್ಲಿ ವಿಶೇಷ ಚಕ್ಕುಲಿ ತಿಂಡಿ ತಿನಿಸು ಮಾಡೋದ್ರಲ್ಲಿ ಜನರು ನಿರತರಾಗಿದ್ದಾರೆ. ಆದ್ರೆ ಈ ತಿನಿಸನ್ನ ಮಾಡೋಕೆ ಕೂಡು ಕುಟುಂಬ ಒಟ್ಟಾಗಿ ಸೇರಿ ಹಬ್ಬದ ಸಡಗರವನ್ನ ಆಚರಿಸ್ತಾರೆ.

ಜಿಲ್ಲೆಯ ಶಿರಸಿ ಸೇರಿ ಮಲೆನಾಡಿನ ಭಾಗದಲ್ಲಿ ಹಬ್ಬ ಹರಿದಿನಗಳು ವಿಭಿನ್ನ, ವೈವಿಧ್ಯ.. ಅದೇ ಇಲ್ಲಿನವರ ವಿಶೇಷತೆ. ಹಬ್ಬ ಹರಿದಿನವಿರಬಹುದು, ಪೂಜೆ ಪುನಸ್ಕಾರಗಳಿರಬಹುದು. ಎಲ್ಲದರಲ್ಲಿಯೂ ಇತರರಿಗಿಂತ ಸ್ವಲ್ಪ ವಿಭಿನ್ನ. ಈಗ ಗೌರಿ ಗಣೇಶ ಹಬ್ಬದ ಸಂಭ್ರಮ. ಮಲೆನಾಡಿಗರಲ್ಲಿ ಅದರಲ್ಲೂ ಶಿರಸಿ ಹಾಗೂ ಸುತ್ತಮುತ್ತಲಿನ ಭಾಗದವರಿಗೆ ಈ ಹಬ್ಬದ ಸಡಗರ ಸ್ವಲ್ಪ ಜಾಸ್ತಿಯೇ. ಗಣೇಶ ಚತುರ್ಥಿ ಅಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಅದೇನೆ ಇರಲಿ ಯಾವುದೇ ಹಬ್ಬ ಆದ್ರೂ ಮಲೆನಾಡಿಗರಲ್ಲಿ ಅದೇನೋ ಸಂಭ್ರಮ. ಒಂದಲ್ಲಾ ಒಂದು ವಿಶೇಷತೆಯಿಂದ ಹಬ್ಬವನ್ನ ಆಚರಿಸೋ ಮಲೆನಾಡಿಗರು ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸ್ತಾರೆ. ಒಟ್ಟಾರೆ ಹಬ್ಬ ಅಂದ್ರೆ ಅಲ್ಲಿ ವಿಭಿನ್ನ ತಿಂಡಿ ತಿನಿಸುಗಳು ಇರೋದು ಕಾಮನ್. ಆದ್ರೆ ಚಕ್ಕುಲಿ ಕಂಬಳ ಮಾತ್ರ ಗಣೇಶ ಚತರ‍್ಥಿಯ ವಿಶೇಷ ತಿನಿಸು ಅನ್ನೋದಂತೂ ನಿಜ.

Related