ಆನ್ ಲೈನ್ ಆರ್ಡರ್ ಮಾಡಿದ್ದ ಆಹಾರದಲ್ಲಿ ಹಾವಿನ ಪೊರೆ

  • In Crime
  • May 11, 2022
  • 198 Views
ಆನ್ ಲೈನ್ ಆರ್ಡರ್ ಮಾಡಿದ್ದ ಆಹಾರದಲ್ಲಿ ಹಾವಿನ ಪೊರೆ

ಇತ್ತೀಚಿನ ದಿನಗಳಲ್ಲಿ ಫುಡ್​ ಡೆಲಿವರಿ ಪಾರ್ಸೆಲ್​ಗಳು ಹೆಚ್ಚುತ್ತಿದೆ. ಅದರಂತೆ ಫುಡ್ ಡೆಲಿವರಿ ಆ್ಯಪ್​ಗಳೂ ಹೆಚ್ಚುತ್ತಿದೆ. ಆದರೆ ಕೆಲವೊಮ್ಮೆ ಫುಡ್​ ಡೆಲಿವರಿ ಸರ್ವಿಸ್​ ಬಗ್ಗೆ ಕೆಲ ಆರೋಪಗಳು ಇದ್ದೇ ಇದೆ.

ಇತ್ತೀಚಿಗೆ ಗ್ರಾಹಕರೊಬ್ಬರು ತಮ್ಮ ಫುಡ್ ಡೆಲಿವರಿ ಪಾರ್ಸೆಲ್ ನಲ್ಲಿ ಆಹಾರದ ಜೊತೆಗೆ ಹಾವಿನ ಚರ್ಮ ಸಿಕ್ಕಿದ್ದು, ಗ್ರಾಹಕ ಹೌಹಾರಿದ್ದಾರೆ.
ತಿರುವನಂತಪುರಂನ ನೆಡುಮಂಗಾಡು ಪ್ರದೇಶದ ಹೋಟೆಲ್​ನಿಂದ ಪರೋಟಾ ಆರ್ಡರ್​​ ಮಾಡಿದ್ದ ಗ್ರಾಹಕರಿಗೆ ಪ್ಯಾಕ್ ಮಾಡಲು ಬಳಸಿದ ಕಾಗದದಲ್ಲಿ ಸುತ್ತಿದ ಹಾವಿನ ಚರ್ಮ ಸಿಕ್ಕಿದೆ.

ಈ ಬಗ್ಗೆ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪರೋಟ ತಯಾರಿಸಿದ್ದ ಹೋಟೆಲ್​​ ಅನ್ನು ಮುಚ್ಚಲಾಗಿದೆ.

Related