ಯುವಕರೇ ಜೀವ ಉಳಿಸಲು ಮುಂದಾಗಿ

ಯುವಕರೇ ಜೀವ ಉಳಿಸಲು ಮುಂದಾಗಿ

ಸಿರವಾರ: ಸಮಾಜದಲ್ಲಿ ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠದಾನವಾಗಿದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಜೀವ ಉಳಿಸಲು ಮುಂದಾಗಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಚಂದ್ರಶೇಖರ ಸ್ವಾಮಿ ಹೇಳಿದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿವೈಎಫ್‍ಐ ಮತ್ತು ಎಸ್‍ಎಫ್‍ಐ ತಾಲ್ಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಸಮಾಜದಲ್ಲಿ ಪ್ರತಿನಿತ್ಯವೂ ನಾನಾ ಕಾರಣಗಳಿಂದ ರಕ್ತಹೀನತೆ ಉಂಟಾದಾಗ, ಅಂತಹ ಸಂದರ್ಭದಲ್ಲಿ ವ್ಯಕ್ತಿಗಳಿಗೆ ರಕ್ತ ಬೇಕಾಗುತ್ತದೆ. ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ಜೀವ ಉಳಿಸಲು ಮುಂದಾಗಬೇಕು ಎಂದು ಯುವಕರಿಗೆ ಮನವಿ ಮಾಡಿದರು

ಕೆಲವೊಂದು ಸಾರಿ ಅವಶ್ಯಕತೆ ಇದ್ದಾಗ ಒಂದು ಯೂನಿಟ್ ರಕ್ತದಲ್ಲಿರುವ ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮ ತೆರಪಿ, ಪ್ಲೇಟ್ಲೆಟ್ ಕೊಡುವ ಮೂಲಕ ಒಬ್ಬ ಆರೋಗ್ಯವಂತ ಯುವಕ 4 ಜನರಿಗೆ ಜೀವದಾನ ಮಾಡಬಹುದು ಎಂದು ಹೇಳಿದರು.

ಜೆಡಿಎಸ್ ನ ಮುಖಂಡರಾದ ಲೋಕರಡ್ಡಿ. ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆಯ ಟಿ.ಬಸವರಾಜ್, ಸಂಜೀವಿನಿ ಟ್ರಸ್ಟ್‍ನ ಜ್ಞಾನಮಿತ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುನೀಲ್ ಸರೋದೆ ಮಾತನಾಡಿದರು. ಶಿಬಿರಕ್ಕೆ ಹಿರಿಯರು ಹಾಗೂ ಹಲವಾರು ಯುವಕರು ಆಗಮಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

Related