ಕುರುಬರ ಎಸ್‌ಟಿ ಹೋರಾಟದಲ್ಲಿ ಸಿದ್ದು ಕೈವಾಡ

ಕುರುಬರ ಎಸ್‌ಟಿ ಹೋರಾಟದಲ್ಲಿ ಸಿದ್ದು ಕೈವಾಡ

ರಾಯಚೂರು : ಜಿಲ್ಲೆಯ ತಿಂಥಿಣಿಯ ಕಾಗಿನೆಲೆ ಕನಕಗುರು ಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವಕ್ಕೆ ಚಾಲನೆ ನೀಡಿ, ಕುರುಬರಿಗೆ ಎಸ್.ಟಿ ಮೀಸಲಾತಿ ನೀಡಲು ನನ್ನ ವಿರೋಧವಿಲ್ಲ. ಆದರೆ, ಈಗಿನ ಎಸ್.ಟಿ ಮೀಸಲಾತಿ ಹೋರಾಟ ರಾಜಕೀಯ ಪ್ರೇರಿತವಾಗಿದ್ದು, ಆರ್ ಎಸ್‌ಎಸ್ ಕೈವಾಡವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಈ ವೇಳೆ ಮಾತಾನಾಡಿ, ಹೋರಾಟ ರಾಜಕೀಯ ಪ್ರೇರಿತ ಎಂಬ ಕಾರಣಕ್ಕೆ ಕಾರಣಕ್ಕೆ ನಾನು ವಿರೋಧಿಸುತ್ತೇನೆ. ಈಗಿನ ಹೋರಾಟ ಯಾರ ವಿರುದ್ಧ? ಈಶ್ವರಪ್ಪ ವರ್ಸಸ್ ಈಶ್ವರಪ್ಪನಾ? ಈಶ್ವರಪ್ಪ ವರ್ಸೆಸ್ ಯಡಿಯೂರಪ್ಪನಾ? ಅವರದೇ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿದೆ. ಯಾಕೆ ಒತ್ತಡ ಹೇರಿ ಮೀಸಲಾತಿ ಕೊಡಿಸಬಾರದು ಎಂದು ಪ್ರಶ್ನಿಸಿದರು.

ನಾನು ಸಿಎಂ ಇದ್ದಾಗ ನಾಲ್ಕು ಜಿಲ್ಲೆಗಳಲ್ಲಿ ಕುರಬರಿಗೆ ಎಸ್.ಟಿ ಮೀಸಲಾತಿ ನೀಡಿದ್ದೇನೆ. ಕುಲಶಾಸ್ತ್ರ ಅಧ್ಯಯನಕ್ಕೆ ಒಂದು ವರ್ಷವಾಯಿತು. ಯಾಕೆ ಪೂರ್ಣಗೊಳ್ಳುತ್ತಿಲ್ಲ. ಕುರುಬ ಸಮಾಜವನ್ನು ಒಡೆಯುವ ಪ್ರಯತ್ನ ನಡೆದಿದೆ. ಆದರೆ ಅದು ಆಗುವುದಿಲ್ಲ. ಕುರುಬ ಸಮಾಜದ ಮುಖಂಡರಾಗಲು ಈಶ್ವರಪ್ಪ ಹೊರಟಿದ್ದು, ಅದು ಅಸಾಧ್ಯ ಎಂದರು.

Related