ಶ್ರೀ ರಾಧಾಷ್ಟಮಿಯ ಉತ್ಸವ

ಶ್ರೀ ರಾಧಾಷ್ಟಮಿಯ ಉತ್ಸವ

ಬೆಂಗಳೂರು : ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿಯ ದಿನದಂದು ದೇವಿ ಶ್ರೀಮತಿ ರಾಧಾರಾಣಿಯ ಆವಿರ್ಭಾವದ ದಿನ. ಈ ರಾಧಾಷ್ಟಮಿಯು ಶ್ರೀ ಕೃಷ್ಣನ ಭಕ್ತರಿಗೆ ಒಂದು ಪ್ರಮುಖವಾದ ಉತ್ಸವವಿದ್ದು, ಈ ಸಂದರ್ಭದಲ್ಲಿ ಇಸ್ಕಾನ್ ಬೆಂಗಳೂರಿನ ಮುಖ್ಯ ಪೂಜಾ ಮೂರ್ತಿಗಳಾದಂತಹ ಶ್ರೀ ರಾಧಾ ಕೃಷ್ಣಚಂದ್ರರಿಗೆ ಹೊಸ ವಸ್ತ್ರಗಳಿಂದ ಮತ್ತು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ದೇಶದ ಕ್ಷೇಮ ಮತ್ತು ಶಾಂತಿಗಾಗಿ ಇಂದು ಬೆಳಗ್ಗೆ ರಾಧಾ ಸಹಸ್ರನಾಮ ಹೋಮ ನೆರವೇರಿಸಲಾಯಿತು.

ಶ್ರೀ ರಾಧಾ ಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಸಂಜೆ ವೈಭವದ ಅಭಿಷೇಕ ಪಂಚಾಮೃತ, ಔಷಧಿಗಳ ಸ್ನಾನ, ಪುಷ್ಪೋಧಕ ಮತ್ತು 108 ಜಲ ತುಂಬಿದ ಕಳಶಗಳ ನಡೆದಿದೆ. ಭವ್ಯವಾದ ಮಹಾ ಮಂಗಳಾರತಿ ಮತ್ತು ಪಲ್ಲಕ್ಕಿಯೊಂದಿಗೆ ಕಾರ್ಯಕ್ರಮವು ನೆರವೇರಿಸಲಾಯಿತು.

Related