ವ್ಯಕ್ತಿ ಬಲಿ ಪಡೆದ ಶೋಭಾ ಕರಂದ್ಲಾಜೆ ಕಾರು

ವ್ಯಕ್ತಿ ಬಲಿ ಪಡೆದ ಶೋಭಾ ಕರಂದ್ಲಾಜೆ ಕಾರು

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕೆ ಆರ್ ಪುರಂ  ಸುತ್ತಮುತ್ತಲಲ್ಲಿ ಇಂದು ಪ್ರಚಾರವನ್ನು ಕೈಗೊಂಡಿದ್ದು ಪ್ರಚಾರದ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನಒಪ್ಪಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಕೆಆರ್ ಪುರಂ ಸಮೀಪದ ದೇವಸಂದ್ರದಲ್ಲಿ ವಿನಾಯಕ ದೇವಸ್ಥಾನದ ಹತ್ತಿರ ಈ ಘಟನೆ ನಡೆದಿದ್ದು, ಟಿ ಸಿ ಪಾಳ್ಯ ಮೂಲದ ಪ್ರಕಾಶ್ ಎಂಬ ವ್ಯಕ್ತಿ ಸಾವನೋಪ್ಪಿದ್ದಾರೆ.

ಹೌದು, ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ, ರಸ್ತೆ ಬದಿಗೆ ಕಾರು ನಿಲ್ಲಿಸಿ ಡೋರ್ ತೆಗೆಯುತ್ತಿದ್ದಂತೆ ಕಾರನ್ನು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತ ಡೋರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ.

ಆದರೆ, ಕೆಳಗೆ ಬಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಹಿಂದೆ ಬರುತ್ತಿದ್ದ ಖಾಸಗಿ ಬಸ್ ಕೂಡ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಕಾರು ಚಾಲಕ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ ಬಂದು ಪಕ್ಕದಲ್ಲಿನ ಡೋರ್ ತೆಗೆದಿದ್ದಾನೆ. ಆಗ, ಡೋರ್ ಓಪನ್‌ ಆಗುತ್ತಿದ್ದಂತೆ ಕಾರಿನ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಸವಾರ ಪ್ರಕಾಶ್‌ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ.

Related