ರಾಹುಲ್ ಗಾಂಧಿ ವಿರುದ್ದ ಶೋಭಾ ಕರಂದ್ಲಾಜೆ ವಾಗ್ದಾಳಿ

ರಾಹುಲ್ ಗಾಂಧಿ ವಿರುದ್ದ ಶೋಭಾ ಕರಂದ್ಲಾಜೆ ವಾಗ್ದಾಳಿ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಲ್ಲಿ ಕಾಂಗ್ರೇಸ್ ಸಂಸದ ರಾಹುಲ್ ಗಾಂಧಿ ಮಾತನಾಡಿದರು.

ಅವಿಶ್ವಾಸ ನಿರ್ಣಯದ ವೇಳೆ ಲೋಕಸಭೆಯಿಂದ ಹೊರ ಹೋಗುತಿತ್ತಾಗ ತಮ್ಮ ಮೇಲೆ ಬೊಬ್ಬೆ ಹೊಡೆಯುತಿದ್ದ ಖಜಾನೆ ಬೆಂಚುಗಳತ್ತ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಗಾಳಿಯಲ್ಲಿ ಫ್ಲಯಿಂಗ್ ಕಿಸ್ ಊದಿದ್ದಾರೆ ಎನ್ನುವ ಆರೋಪಕ್ಕೆ ಸಂಸತ್ತಿನ ಘನತೆ-ಗೌರವ ಹಾಗೂ ಮಹಿಳಾ ಸಮುದಾಯಕ್ಕೆ ಅವಮಾನಿಸುವಂಥದ್ದು ಖಂಡನೀಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಬುಧವಾರ [09] ಸಂಸತ್ತಿನಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ ಸಚಿವೆ ಸ್ಮೃತಿ ಇರಾನಿ ಭಾಷಣ ಮಾಡಿದ ಬಳಿಕ ಎಲ್ಲರೂ ಎದ್ದು ಹೊರಡುವಾಗ ಅವರ ಮತ್ತು ಮಹಿಳಾ ಸಂಸದರ ಕಡೆ ನೋಡುತ್ತಾ ಫ್ಲೈಯಿಂಗ್ ಕಿಸ್ ಊದಿದ್ದಾರೆ ಮತ್ತು ದುರ್ನಡತೆ ಮತ್ತು ಅಹಂಕಾರದ ಪರಮಾಧಿ ಮೆರೆದಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಯುವಕರು, ಮಹಿಳೆಯರು, ಮಕ್ಕಳು ಟಿವಿಗಳ ಮುಂದೆ ಕೂತು ರಾಹುಲ್ ಗಾಂಧಿ ವರ್ತನೆ ನೋಡಿ ದುಃಖಿಸಿರುತ್ತಾರೆ ಎಂದು ಸಚಿವೆ ಶೋಭಾ ಕರಂದ್ಲಾಜಿ ಹೇಳಿದ್ದಾರೆ.

ವರದಿಗಾರ

ಎ.ಚಿದಾನಂದ

Related