ಶಿವರಾತ್ರಿ ಪೂಜೆಗೆ ಅರಳಿ ನಿಂತಿವೆ ಹೂ

  • In State
  • February 21, 2020
  • 440 Views
ಶಿವರಾತ್ರಿ ಪೂಜೆಗೆ ಅರಳಿ ನಿಂತಿವೆ ಹೂ

ಹಾಸನ, ಫೆ. 21 : ಮುತ್ತುಗದ ಹೂವು ಶಿವರಾತ್ರಿ ಹಬ್ಬದ ದಲ್ಲಿ ಮಾತ್ರ ಅರಳುತ್ತೆ. ಮುತ್ತುಗದ ಹೂವನ್ನು ಶಿವರಾತ್ರಿ ಹಬ್ಬದಂದು ವಿಶೇಷ ಶಿವನ ಪೂಜೆಗೆ ಬಳಸಲಾಗುತ್ತೆ. ಈ ಮುತ್ತುಗದ ಹೂವು ಹೆಚ್ಚಾಗಿ ಬಿಟ್ಟರೆ ಆ ವರ್ಷ ಉತ್ತಮ ಮಳೆಯಾಗುತ್ತೆ ಎಂಬ ನಂಬಿಕೆಯೂ ಇದೆ. ಹೀಗೆ ಶಿವನಿಗೆ ಸಮರ್ಪಣೆಯಾಗುವ ಕೆಂಪು ವರ್ಣದ ಮುತ್ತುಗದ ಹೂವು ಶಿವರಾತ್ರಿ ಸಮಯದಲ್ಲಿ ರೈತನ ಮೊಗದಲ್ಲಿ ಹರ್ಷ ತಂದಿದೆ.
ಮುತ್ತುಗದ ಹೂವು ಸಾಮಾನ್ಯವಾಗಿ ಪ್ರತಿ ವರ್ಷ ಶಿವರಾತ್ರಿ ಹಬ್ಬದ ಸಮಯದಲ್ಲಿ ಅರಳುತ್ತೆ. ರೈತರು ಮಳೆ, ಬೆಳೆಯ ಲೆಕ್ಕಾಚಾರ ಹಾಕುತ್ತಾರೆ. ಈ ಹೂವು ಹೆಚ್ಚಾಗಿ ಬಿಟ್ಟರೆ ಆ ವರ್ಷ ಉತ್ತಮ ಮಳೆ, ಬೆಳೆಯಾಗುತ್ತೆ ಎಂಬ ನಂಬಿಕೆ ಕೂಡ ಇದೆ. ಈ ವರ್ಷವಂತೂ ಮುತ್ತುಗದ ಮರಗಳು ಹೂವಿನಿಂದ ತುಂಬಿ ತುಳುಕುತ್ತಿದ್ದು ಉತ್ತಮ ಮಳೆಯಾಗುವ ಮುನ್ಸೂಚನೆ ನೀಡುತ್ತಿದೆ. ಈ ಬಾರಿಯಂತು ಮುತ್ತುಗದ ಮರ ಸಾಕಷ್ಟು ಪ್ರಮಾಣದಲ್ಲಿ ಹೂ ಬಿಟ್ಟು ಪ್ರಕೃತಿಯ ಸೌಂದರ್ಯವನ್ನು ದುಪ್ಪಟ್ಟು ಮಾಡಿರುವುದರ ಜೊತೆಗೆ, ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ಈ ಮರದ ಚಕ್ಕೆಯನ್ನು ಹೋಮಗಳಲ್ಲೂ ಕೂಡ ಬಳಸುತ್ತಾರೆ. ಹೀಗಾಗಿ ಮುತ್ತುಗದ ಹೂವು ಪ್ರಕೃತಿಯ ಚೆಲುವನ್ನು ಹೆಚ್ಚಿಸಿರುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿದೆ. ಈ ಎಲ್ಲ ಕಾರಣಗಳಿಗಾಗಿಯೇ ಶಿವರಾತ್ರಿ ಹಬ್ಬದ ದಿನವಾದ ಇಂದು ಶಿವನ ಪೂಜೆಗೆ ಮುತ್ತುಗದ ಹೂವು ವಿಶೇಷವಾಗಿ ಸಮರ್ಪಣೆಯಾಗುತ್ತಿದೆ.

Related