ಶಿವಾಜಿನಗರ  ಪ್ಲಾಸ್ಟಿಕ್, ತ್ಯಾಜ್ಯಮುಕ್ತ 

ಶಿವಾಜಿನಗರ  ಪ್ಲಾಸ್ಟಿಕ್, ತ್ಯಾಜ್ಯಮುಕ್ತ 

ಬೆಂಗಳೂರು : ಶಿವಾಜಿನಗರವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ತ್ಯಾಜ್ಯಮುಕ್ತವನ್ನಾಗಿಸಲು ಯೋಜನೆ ರೂಪಿಸುವುದಾಗಿ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಶಿವಾಜಿನಗರದಲ್ಲಿ ದಿನಕ್ಕೆ ನೂರಾರು ಕೋಟಿ ರೂಪಾಯಿ ವ್ಯಾಪಾರ, ವಹಿವಾಟು ನಡೆಯುತ್ತಿದೆ.

ಜೊತೆಗೆ ಅಲ್ಲಿಯೇ ಹೆಚ್ಚಾಗಿ ಗ್ರಾಹಕರು, ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಹೀಗಾಗಿ ಜನರು ಕ್ಲೀನ್ ಮಾಡಿದ್ರೂ ಬಿಬಿಎಂಪಿಯೇ ಕಸ ತಂದು ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡಲು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ತ್ಯಾಜ್ಯಮುಕ್ತ ಪ್ರದೇಶವನ್ನಾಗಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಈ ಭಾಗದ ವ್ಯಾಪ್ತಿಯಲ್ಲಿ ಜವಳಿ ಮಳಿಗೆಗಳು ಮಾತ್ರವಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಮಾಂಸದಂಗಡಿ, ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಬಗೆಯ ಅಂಗಡಿಗಳಿವೆ. ಈ ಕಾರಣಕ್ಕಾಗಿ ನಿತ್ಯ ರಸ್ತೆಗಳಲ್ಲಿ ತ್ಯಾಜ್ಯ ಕಂಡುಬರುತ್ತದೆ.

ಆದರೆ ಮೈಕ್ರೋ ಪ್ಲ್ಯಾನ್ ಜಾರಿಯಾದಲ್ಲಿ ಕಸಮುಕ್ತ ರಸ್ತೆ, ಪರಿಸರ ನಿರ್ಮಿಸಬಹುದಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮೈಕ್ರೋ ಯೋಜನೆಯಲ್ಲಿ ಕಸದ ಬುಟ್ಟಿ, ಅಂಗಡಿ ಮಾಲೀಕರೊಂದಿಗೆ ಸಂವಾದ, ಕಸದ ನಿಯಮ ಉಲ್ಲಂಘಿಸಿದರೆ ಶುಲ್ಕ ವಿಧಿಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

Related