ಶಿವಾಜಿಯ ಹೈಂದವಿ ಸ್ವರಾಜ್ಯ ಪ್ರಸ್ತುತ

ಶಿವಾಜಿಯ ಹೈಂದವಿ ಸ್ವರಾಜ್ಯ ಪ್ರಸ್ತುತ

ತಿಪಟೂರು, ಫೆ. 20: ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದ ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ, ಗುರುಭಕ್ತಿ, ಮಾತೃಭಕ್ತಿ ಯುವಜನೆತೆಗೆ ಪೂರಕವಾಗಿದ್ದು ಇತಂಹ ವಿಷಯಗಳನ್ನು ತಿಳಿಸುವ ಕೆಲಸವನ್ನು ತಿಪಟೂರು ನಗರದ ಶಿವಾಜಿ ಸೇನೆ ಇಂದು ಮಾಡಿತು.
ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧರೆನ್ನಿಸಿಕೊಂಡು ಇವರ ಗೆರಿಲ್ಲಾ ಯುದ್ದ ತಂತ್ರ ವಿದೇಶಿಯರ ಮೆಚ್ಚೆಗೆಯನ್ನು ಗಳಿಸಿತ್ತು. ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜ ಸ್ವಾಭಿಮಾನಿ ರಾಷ್ಟ್ರ ನಿರ್ವಣದ ಕನಸು ಇಂತವರ ಹುಟ್ಟುಹಬ್ಬವನ್ನು ಆಚರಿಸಲು ನಗರದ ಯುವಕರು ಶಿವಾಜಿ ಸೇನೆಯಿಂದ ಇಂದು ನಗರದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಪ್ರತಿಮೆಯ ಭವ್ಯಮೆರವಣಿಗೆಯನ್ನು ಹಮ್ಮಿಕೊಂಡಿತ್ತು.

Related