ಬೆಳಗಾವಿ ಗಡಿಯಲ್ಲಿ ಶಿವಸೇನೆ ಹೈಡ್ರಾಮಾ

ಬೆಳಗಾವಿ ಗಡಿಯಲ್ಲಿ ಶಿವಸೇನೆ ಹೈಡ್ರಾಮಾ

ಬೆಳಗಾವಿ : ಶಿವಸೇನೆ ಪುಂಡರು ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದಲ್ಲಿ ಹೈಡ್ರಾಮಾ ನಡೆಸಿದರು.

ಇತ್ತೀಚೆಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಮರಾಠಿ ಭಾಷಿಕರು ಹೆಚ್ಚಾಗಿರುವ ಬೆಳಗಾವಿ ಹಾಗೂ ಇನ್ನಿತರೆ ಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಅಂತ ವಿವಾದಾದ್ಮಕ ಹೇಳಿಕೆ ನೀಡಿ  ಕರ್ನಾಟಕವನ್ನ  ಕೆಣಕಿದ್ದರು.  ಇದರ  ಬೆನ್ನಲ್ಲೇ ಇಂದು ಶೀವಸೇನೆ ಕಾರ್ಯಕರ್ತರು ಕರ್ನಾಟಕದ ಗಡಿಯೊಳಗೆ ನುಗ್ಗಿ, ಬೆಳಗಾವಿ ಮಹಾನಗರ ಪಾಲಿಕೆ ಬಳಿ ಕನ್ನಡ ಧ್ವಜವನ್ನ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ.

ನಿಪ್ಪಾಣಿ, ಬಾಲ್ಕಿ, ಬೀದರ್, ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿಲೇಬೇಕೆಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಕರ್ನಾಟಕ ಪೊಲೀಸರು ಪ್ರತಿಭಟನಾನಿರತರನ್ನ ತಡೆಯಲು ಮುಂದಾದಾಗ ಘರ್ಷಣೆ ನಡೆದಿದೆ. ಕರ್ನಾಟಕ ಪೋಲಿಸರ ಜೊತೆ ಶಿವಸೇನೆ ಕಾರ್ಯಕರ್ತರು ವಾಗ್ವಾದ, ತಳ್ಳಾಟ, ನೂಕಾಟ ನಡೆಸಿದರು.

Related