ಐಸಿಸಿಗೆ ಶರ್ಮಾ ಟಾಂಗ್

ಐಸಿಸಿಗೆ ಶರ್ಮಾ ಟಾಂಗ್

ದುಬೈ, ಮಾ. 24 : ಐಸಿಸಿ ತನ್ನ ಟ್ವಿಟರ್ ಪೇಜ್ ನಲ್ಲಿ ಸಮಕಾಲೀನ ಮತ್ತು ಮಾಜಿ ಕ್ರಿಕೆಟಿಗರ ಪೈಕಿ ಪುಲ್ ಶಾಟ್ ಹೊಡೆಯಲು ಯಾರು ಬೆಸ್ಟ್ ಎಂದು ನಾಲ್ವರು ಕ್ರಿಕೆಟಿಗರ ಫೋಟೋ ಸಮೇತ ಪ್ರಶ್ನೆ ಕೇಳಿತ್ತು. ಪೈಕಿ ಮಾಜಿ ದಿಗ್ಗಜ ವಿವಿ ರಿಚರ್ಡ್ಸ್, ರಿಕಿ ಪಾಂಟಿಂಗ್, ಹರ್ಷಲ್ ಗಿಬ್ಸ್ ಮತ್ತು ವಿರಾಟ್ ಕೊಹ್ಲಿ ಫೋಟೋ ಹಾಕಿತ್ತು. ಆದರೆ ರೋಹಿತ್ ಕೂಡಾ ಪುಲ್ ಶಾಟ್ ಹೊಡೆಯುವುದರಲ್ಲಿ ಎತ್ತಿದ ಕೈ. ಆದರೆ ತಮ್ಮನ್ನು ಈ ಫೋಟೋ ಲಿಸ್ಟ್ ನಲ್ಲಿ ಸೇರಿಸದ್ದಕ್ಕೆ ರೋಹಿತ್ ಐಸಿಸಿಗೆ ಟಾಂಗ್ ಕೊಟ್ಟಿದ್ದಾರೆ. ‘ಯಾರೋ ಒಬ್ಬರು ಮಿಸ್ ಆಗಿದ್ದಾರೆ ಎನಿಸುತ್ತದೆ? ಮನೆಯಿಂದಲೇ ಕೆಲಸ ಮಾಡುವುದು ಅಷ್ಟು ಸುಲಭವಲ್ಲ ಬಿಡಿ’ ಎಂದು ರೋಹಿತ್ ಐಸಿಸಿ ಕಾಲೆಳೆದಿದ್ದಾರೆ.

Related