ಪರೀಕ್ಷೆ ರದ್ದಿಗೆ ಎಸ್‌ಎಫ್‌ಐ ಒತ್ತಾಯ

ಪರೀಕ್ಷೆ ರದ್ದಿಗೆ ಎಸ್‌ಎಫ್‌ಐ ಒತ್ತಾಯ

ಕಲಬುರ್ಗಿ : ಸಾಂಕ್ರಾಮಿಕ ರೋಗ ಸಾಕಷ್ಟು ಹಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಕಾನೂನು, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ನಡೆಸಿದರು.

ಕೊರೋನಾ ಹಿನ್ನಲೇ ರಾಜ್ಯದ ಜನತೆಗೆ ಹೊಟ್ಟೆ, ಬಟ್ಟೆ, ಆಶ್ರಯ ಮತ್ತು ಉದ್ಯೋಗಕ್ಕಾಗಿ ಪರದಾಡುತ್ತಾ ಆದಾಯ ಇಲ್ಲದೇ ಅತಿಯಾದ ಸಂಕಷ್ಟಕ್ಕೆ ಸಿಲುಕಿ ಸಾವು ಬದುಕಿನ ಮಧ್ಯೆ ಜೀವನ ಸಾಗಿಸುತ್ತಿದ್ದಾರೆ.

ರಾಜ್ಯ ಸರ್ಕಾರ 6 ತಿಂಗಳ ಎಲ್ಲ ಶೈಕ್ಷಣಿಕ ಶುಲ್ಕ ಮನ್ನಾ ಮಾಡಬೇಕು. ಸೆಮಿಸ್ಟರ್ ಅಭಿವೃದ್ಧಿ ಶುಲ್ಕ, ಪರೀಕ್ಷಾ ಶುಲ್ಕ, ಹಾಸ್ಟೆಲ್ ಶುಲ್ಕಗಳನ್ನು ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿಧಿಸಬಾರದು.

ಇಲ್ಲವೇ ಕೇರಳ ರಾಜ್ಯ ಸರ್ಕಾರದ ಮಾದರಿಯಲ್ಲಿ ಸರ್ಕಾರ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 10 ಕೆ.ಜಿ. ಉಚಿತ ಆಹಾರ ಧಾನ್ಯಗಳನ್ನು ಮುಂದಿನ 6 ತಿಂಗಳವರೆಗೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Related