17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಕೇರಳದಲ್ಲಿ 17 ವರ್ಷದ ಬಾಲಕಿ ಮೇಲೆ ಬರೋಬ್ಬರಿ 38 ಮಂದಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಈ ಹಿಂದೆ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು, ಈ ಹಿನ್ನೆಲೆ ಮಲಪ್ಪುರಂನ ರಕ್ಷಣಾ ಕೇಂದ್ರದಲ್ಲಿ ಬಾಲಕಿ ವಾಸ್ತವ್ಯವಿದ್ದಳು ಕಳೆದ ವರ್ಷ ಅಲ್ಲಿಂದ ಬಿಡುಗಡೆಯಾಗಿ ಹೊರ ಬಂದಿದ್ದಳು.

ಬಂದ  ನಂತರ ಇದೀಗ 38 ಮಂದಿ ತನ್ನ ಮೇಲೆ ವಿವಿಧ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಇತ್ತೀಚೆಗೆ ನಿರ್ಭಯಾ ಕೇಂದ್ರದಲ್ಲಿ ನಡೆದ ಸಮಾಲೋಚನಾ ಕಾರ್ಯಕ್ರಮದಲ್ಲಿ ಬಾಲಕಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಅಪ್ರಾಪ್ತ ಬಾಲಕಿಯ ಮೇಲೆ 2016ರಲ್ಲಿ ಮೊದಲ ಬಾರಿಗೆ ಅತ್ಯಾಚಾರ ನಡೆದಿತ್ತು. ಆಗ ಆಕೆಗೆ 13 ವರ್ಷವಾಗಿತ್ತು. ಈ ವೇಳೆ ಪೊಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕೊರೋನಾ ಲಾಕ್‌ಡೌನ್ ವೇಳೆ ಬಾಲಕಿ ನಿರ್ಭಯಾ ಕೇಂದ್ರದ ಆಡಳಿತ ಮಂಡಳಿ, ಮನೆಗೆ ಕಳುಹಿಸಿತ್ತು. ಆದರೆ ಏಕಾಏಕಿ ಬಾಲಕಿ ನಾಪತ್ತೆಯಾಗಿದ್ದಳು. ನಾಪತ್ತೆಯಾಗಿದ್ದ ವೇಳೆ ಬೇರೆ ಬೇರೆ ರೀತಿಯಲ್ಲಿ ಬರೋಬ್ಬರಿ 38 ಮಂದಿಯಿಂದ  ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ಬಾಲಕಿ ತಿಳಿಸಿದ್ದಾಳೆ.

ಈ ಸಂಬಂಧ ಪೊಲೀಸರು 33 ಮಂದಿಯನ್ನು ಅರೆಸ್ಟ್ ಮಾಡಿದರು.

Related