ಮತ್ತೆ ಸಿನಿಮಾಗೆ ಕಾಲಿಟ್ಟ ಹಿರಿಯ ನಟಿ

ಮತ್ತೆ ಸಿನಿಮಾಗೆ ಕಾಲಿಟ್ಟ ಹಿರಿಯ ನಟಿ

ಜನಪ್ರಿಯ ನಟಿ ಉಮಾಶ್ರೀ ಸಿನಿಮಾಗಳಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. 5 ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದರು. 2015 ರಲ್ಲಿ ‘ಲವ್ ಯೂ ಆಲಿಯಾ’ ಸಿನಿಮಾದಲ್ಲಿ ನಟಿಸಿ ಉಮಾಶ್ರೀ ಮತ್ತೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ.

ಇದೀಗ ನಟಿ ಉಮಾಶ್ರೀ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರು ಧನಂಜಯ್ ಅವರ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Related