ಅನಿರ್ದಿಷ್ಟಾವಧಿ ಸತ್ಯಾಗ್ರಹ

ಅನಿರ್ದಿಷ್ಟಾವಧಿ ಸತ್ಯಾಗ್ರಹ

ಚಿಂಚೋಳಿ: ಪಟ್ಟಣದ ಚಂದಾಪುರ ಶಾಸಕರ ಕಾರ್ಯಾಲಯ ಎದುರು ಪೋಲಕಪಳ್ಳಿ ಗ್ರಾಮದ ನಂದಿ ಕುಮಾರ್ ಪಾಟೀಲ್ ಅವರು ಕೆಲ ಗಂಟೆಗಳ ಕಾಲ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡರು ಪೋಲಕಪಳ್ಳಿ ಗ್ರಾ.ಪಂ ದುರಾಡಳಿತ ಮತ್ತು ಭ್ರಷ್ಟಾಚಾರ, ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ೨ ವರ್ಷಗಳಿಂದ ಮಾಡಿರುವ ಮನವಿ ಹಾಗೂ ಮೇಲ್ಮನವಿಗಳಿಗೆ ಸ್ಪಂದಿಸದೇ ಉದಾಸೀನ ಮಾಡುತ್ತಿರುವ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನಂದಿ ಕುಮಾರ್ ಪಾಟೀಲ್ ನಮ್ಮ ಗ್ರಾಮದ ಸಮಸ್ಯೆ ಬಗೆ ಚಿಂಚೋಳಿ ಶಾಸಕರಾದ ಡಾ. ಅವಿನಾಶ್ ಜಾಧವ್ ಅವರಿಗೆ ೭ ಬಾರಿ ಮನವಿ ಮಾಡಿದ್ದು ಇಲ್ಲಿಯವರೆಗೆ ಯಾವುದೇ ರೀತಿ ಸ್ಪಂದನೆ ತೋರಿಲ್ಲ! ನಮ್ಮ ಗ್ರಾಂ.ಪಂ ಅಭಿವದ್ಧಿ ಅಧಿಕಾರಿ ಬೇಜವಾಬ್ದಾರಿತನ ಆತನ ಕಾರ್ಯವೈಖರಿ ಅಸಮಾಧಾನ ಇದ್ದು, ಅಂಥ ಅಧಿಕಾರಿಯನ್ನು ನಮ್ಮೂರಿನ ಮೂಲ ಸೌಕರ್ಯಗಳ ಕೆಲಸವನ್ನು ಮಾಡಿಸಿ ಇಲ್ಲಾಂದ್ರೆ ಮನೆಗೆ ಕಳಿಸಿ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಇದರಿಂದ ಬೇಸತ್ತು ನಾನು ಇವತ್ತು ಶಾಸಕರ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದೇನೆ ಎಂದರು.
ಈ ವಿಷಯ ತಿಳಿದ ಬಿಜೆಪಿ ಮುಖಂಡರುಗಳು ಶಾಸಕರ ಕಾರ್ಯಾಲಯಕ್ಕೆ ದೌಡಾಯಿಸಿ ನಂದಿ ಕುಮಾರ್ ಪಾಟೀಲ್ ಅವರಿಗೆ ಮನವೊಲಿಸಲು ಪ್ರಯತ್ನಪಟ್ಟರು, ಈ ಸಂದರ್ಭದಲ್ಲಿ ಚಿಂಚೋಳಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ ಅವರು ಶಾಸಕರಿಗೆ ಫೋನ್ ಮೂಲಕ ಸಂಪರ್ಕಿಸಿ ಪೋಲಕಪಳ್ಳಿಯ ಸಮಸ್ಯೆ ಮನವರಿಕೆ ಮಾಡಿಕೊಟ್ಟರು, ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳು ೧೫ ದಿನಗಳಲ್ಲಿ ಪರಿಹರಿಸಲಾಗುವುದು. ಈಗಾಗಲೇ ಮುಖ್ಯ ರಸ್ತೆಯಿಂದ ಅಣವಾರ ಗ್ರಾಮಕ್ಕೆ ಹೋಗುವ ರಸ್ತೆ ಅನುದಾನ ಆಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಪ್ರತ್ಯೇಕ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಮಾಡಿಸಿಕೊಡುವುದು, ಸಿಸಿ ರಸ್ತೆ ಚರಂಡಿ , ಶುದ್ಧ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ಕೂಡಲೇ ಮಾಡಲಾಗುವುದೆಂದು ಶಾಸಕ ಡಾ. ಅವಿನಾಶ್ ಜಾಧವ್ ಫೋನ್ ಮುಖಾಂತರ ನಂದಿ ಕುಮಾರ್ ಪಾಟೀಲ್ ಅವರಿಗೆ ಹೇಳಿದರು.

ಈ ವೇಳೆ ಲಕ್ಷ್ಮಣ ಆವಂಟಿ, ಶ್ರೀಮಂತ ಕಟ್ಟಿಮನಿ, ಅಶೋಕ ಚೌಹಾಣ್, ಜಗದೀಶ್ ಸಿಂಗ್ ಠಾಕೂರ್, ಚಂದ್ರ ಶೆಟ್ಟಿ, ಸತೀಶ್ ರೆಡ್ಡಿ, ಪೋಲಕಪಳ್ಳಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಇದ್ದರು.

Related