ಜನವರಿ 27 ಶಶಿಕಲಾ ಬಿಡುಗಡೆ?

ಜನವರಿ 27 ಶಶಿಕಲಾ ಬಿಡುಗಡೆ?

ಚೆನ್ನೈ: ಆಸ್ತಿ ಪ್ರಕರಣ ಸಂಬAಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆಯ ಮಾಜಿ ನಾಯಕಿ ವಿ.ಕೆ. ಶಶಿಕಲಾ ಅವರು 2021ರ ಜನವರಿ 27ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶಶಿಕಲಾ ಅವರಿಗೆ ನ್ಯಾಯಾಲಯವು ೨೦೧೪ರಲ್ಲಿ 10 ಕೋಟಿ ಹತ್ತು ಸಾವಿರ ದಂಡ ವಿಧಿಸಿತ್ತು. ಈ ದಂಡವನ್ನು ಬುಧವಾರ ಅವರ ಸಂಬAಧಿಕರು ನಾಲ್ಕು ಡಿ.ಡಿ.ಗಳ ಮೂಲಕ ಜಮೆ ಮಾಡಿದ್ದಾರೆ. ದಂಡವನ್ನು ನ್ಯಾಯಾಲಯವು ಸ್ವೀಕರಿಸಿ ಜೈಲು ಆಡಳಿತಕ್ಕೆ ಅಧಿಕೃತ ಮಾಹಿತಿಯನ್ನೂ ನೀಡಲಾಗಿದೆ. ಆದ್ದರಿಂದ ೨೦೨೧ರಲ್ಲಿ ಶಶಿಕಲಾ ಬಿಡುಗಡೆಯಾಗುವುದು ಖಚಿತ’ ಎಂದು ಶಶಿಕಲಾ ಪರ ವಕೀಲ ಎನ್. ರಾಜಸೆಂತೂರ್ ಪಾಂಡ್ಯನ್ ಹೇಳಿದ್ದಾರೆ.

ಆ ಮೂಲಕ ಶಶಿಕಲಾ ಅವರ ಬಿಡುಗಡೆಗೆ ಇದ್ದ ಅಡ್ಡಿಯೊಂದು ನಿವಾರಣೆಯಾದಂತಾಗಿದೆ. 2017ರ ಫೆ.15ರಿಂದ ಪರಪ್ಪನ ಅಗ್ರಹಾರದಲ್ಲಿ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ.

Related