ಸುಶೀಲ್ ಆತ್ಮಹತ್ಯೆ ತಿಳಿದರೆ ಶಾಕ್

  • In Cinema
  • July 9, 2020
  • 610 Views
ಸುಶೀಲ್ ಆತ್ಮಹತ್ಯೆ ತಿಳಿದರೆ ಶಾಕ್

ಬಣ್ಣದ ಲೋಕದಲ್ಲಿ ಭರವಸೆಯ ನಟನಾಗಿದ್ದ ಕಿರುತೆರೆ ನಟ ಸುಶೀಲ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ನಟ ದುನಿಯಾ ವಿಜಯ್, ನಟ ಚಂದನ್ ಸೇರಿದಂತೆ ಹಲವರು ಕಣ್ಣೀರು ಮಿಡಿದಿದ್ದಾರೆ.

ಸುಶೀಲ್ (30) ಅವರು ಮಂಡ್ಯದಲ್ಲಿ ತಮ್ಮ ಸ್ನೇಹಿತನ ರೂಮಿನಲ್ಲಿ ಜೀವ ಕಳೆದುಕೊಂಡಿದ್ದಾರೆ.

ಸುಶೀಲ್ ಅವರು ಅಂತಪುರ, ರಾಧಾರಮಣ ಧಾರವಾಹಿಗಳಲ್ಲಿ ಹಾಗೂ ಸಲಗ, ಕಮರೊಟ್ಟು ಚೆಕ್ ಪೋಸ್ಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಬೆಂಗಳೂರಿನಲ್ಲಿ ‘ಲೋಟಸ್’ ಜಿಮ್ ತೆರೆದಿದ್ದ ಸುಶೀಲ್, ಲಾಕ್‍ಡೌನ್ ಹಿನ್ನೆಲೆ ಜಿಮ್ ಕ್ಲೋಸ್ ಮಾಡಿದ್ದರು. ಆತ್ಮಹತ್ಯೆಗೆ ಸಮರ್ಪಕ ಕಾರಣ ತಿಳಿದು ಬಂದಿಲ್ಲ. ಆದರೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಊಹಿಸಲಾಗಿದೆ.

Related