ಸಲ್ಮಾನ್ ಖಾನ್ ಗೆ ವಿಲನ್ ಆದ ಸೌತ್ ಸ್ಟಾರ್..

  • In Cinema
  • May 25, 2022
  • 220 Views
ಸಲ್ಮಾನ್ ಖಾನ್ ಗೆ ವಿಲನ್ ಆದ ಸೌತ್ ಸ್ಟಾರ್..

ಸಲ್ಮಾನ್ ಖಾನ್ ನಟನೆಯ ಕಭಿ ಈದ್ ಕಭಿ ದಿವಾಳಿ ಸಿನಿಮಾದಿಂದ ನಿರ್ಮಾಪಕ ಸಾಜಿದ್ ನಾದಿಯಾವಾಲಾ, ನಿರ್ದೇಶಕ ಫರ್ಹಾದ್ ಸಾಮ್ಜಿ ಹಾಗೂ ನಟ, ಸಲ್ಮಾನ್ ಖಾನ್ ತಂಗಿಯ ಗಂಡ ಆಯುಷ್ ಶರ್ಮಾ ಸಿನಿಮಾದಿಂದ ಹೊರನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸುದ್ದಿ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೀಗ ಸಿನಿಮಾಗೆ ಸೌತ್ನ ಸ್ಟಾರ್ ವಿಲನ್ ಆಯ್ಕೆಯಾಗುವ ಮೂಲಕ ಸಿನಿಮಾದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Khan) ಅವರ ಹೊಸ ಸಿನಿಮಾ ಕಭಿ ಈದ್ ಕಭಿ ದಿವಾಳಿ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಸಲ್ಮಾನ್ ಖಾನ್ ಅವರ ಈ ಸಿನಿಮಾ ಬಾಲಿವುಡ್ನ ಹಾಟ್ ಟಾಪಿಕ್ ಆಗಿದೆ. ಈ ಸಿನಿಮಾದಿಂದ ಒಬ್ಬರೇ ಹೊರನಡೆಯುತ್ತಿರುವ ವಿಚಾರ ಅನೇಕ ದಿನಗಳಿಂದ ಸದ್ದು ಮಾಡುತ್ತಿತ್ತು. ಇದೀಗ ಸಿನಿಮಾಗೆ ಆಯ್ಕೆಯಾದ ಸೌತ್ ಕಲಾವಿದರ ವಿಚಾರವಾಗಿ ಸದ್ದು ಮಾಡುತ್ತಿದೆ.

ಸಲ್ಮಾನ್ ಸಿನಿಮಾದಲ್ಲಿ ಈಗಾಗಲೇ ಸೌತ್ ಸ್ಟಾರ್ ನಟಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದರು. ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಪೂಜಾ ಬಳಿಕ ತೆಲುಗು ನಟ ವೆಂಕಟೇಶ್ ಸಿನಿಮಾತಂಡ ಸೇರಿಕೊಂಡಿದ್ದಾರೆ. ಇವರಿಬ್ಬರ ಬಳಿಕ ಇದೀಗ ಮತ್ತೋರ್ವ ಸೌತ್ ಸ್ಟಾರ್ ಸಲ್ಮಾನ್ ಸಿನಿಮಾ ಸೇರಿಕೊಂಡಿದ್ದಾರೆ. ಅದು ಮತ್ಯಾರು ಅಲ್ಲ ದಕ್ಷಿಣ ಭಾರತದ ಖ್ಯಾತ ಖಳನಟ ಜಗಪತಿ ಬಾಬು. ಹೌದು, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ಗೆ ವಿಲನ್ ಆಗಿ ಜಗಪತಿ ಬಾಬು ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

Related