ಗಮನ ಸೆಳೆದ ಸಖಿ ಮತಗಟ್ಟೆ

  • In State
  • May 7, 2024
  • 98 Views
ಗಮನ ಸೆಳೆದ ಸಖಿ ಮತಗಟ್ಟೆ

ಔರಾದ:  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಇಂದು ಎರಡನೇ ಮಂತದ ಮತದ ನಡೆಯುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬಿರು ಬಿಸಿಲಿನ ಮಧ್ಯದಲ್ಲಿ ಭರ್ಜರಿ ಮತದಾನ ನಡೆಯುತ್ತಿದೆ.

ಇನ್ನು ಮಹಿಳಾ ಮತದಾರರ ಗಮನ ಸೆಳೆಯಲು ಗುಲಾಬಿ ಬಣ್ಣದ ಅಲಂಕಾರಿಕಾ ವಸ್ತುಗಳಿಂದ ನಿರ್ಮಿಸಿರುವ ‘ಸಖಿ’ ಮತಗಟ್ಟೆಗಳು ಪಟ್ಟಣದಲ್ಲಿಯೇ ಆಕರ್ಷೀಣಿಯ ಕೇಂದ್ರವಾಗಿ ಕಂಡು ಬಂದವು.

ಔರಾದ ಪಟ್ಟಣದ ವ್ಯಾಪ್ತಿಯಲ್ಲಿಯೇ ಮೂರು ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳೆಂದು ಗುರುತಿಸಿ ವಿಶೇಷವಾದ ದೀಪಾಲಂಕಾರ, ಬಲೂನು ಮತ್ತು ಬಣ್ಣದ ಹಾಳೆಗಳಿಂದ ಝಗಮಗಿಸುವಂತ ದೃಶ್ಯಾವಳಿಗಳನ್ನು ಅಲಂಕರಿಸಿದನ್ನು ನೋಡಿದ ಮಹಿಳೆಯರು ಮತದಾನದಲ್ಲಿ ಆಸಕ್ತಿ ಮೂಡುವಂತೆ ಮಾಡಿತು.

ಬೀರು ಬಿಸಿಲಿನ ನಡುವೆ ಬೆಳಿಗ್ಗೆಯಿಂದಲೇ ಮಹಿಳೆಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಬೇಸಿಗೆ ಬಿಸಿಲಿನ ಅಂಗವಾಗಿ ಪ್ರತಿ ಮತಗಟ್ಟೆಗಳಲ್ಲಿ ಮತದಾರರು ವಿಶ್ರಾಂತಿ ಪಡೆಯಲು ಪೆಂಡಾಲ ವ್ಯವಸ್ಥೆ ಮಾಡಲಾಗಿದೆ.

Related