ಸಿಲಿಕಾನ್ ಸಿಟಿಯಲ್ಲಿ ಖಾಸಗಿ ಶಾಲೆಗಳ ಮೇಲೆ ಆರ್ ಟಿ ಓ ದಾಳಿ

ಸಿಲಿಕಾನ್ ಸಿಟಿಯಲ್ಲಿ ಖಾಸಗಿ ಶಾಲೆಗಳ ಮೇಲೆ ಆರ್ ಟಿ ಓ ದಾಳಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಸಗಿ ಶಾಲಾ ವಾಹನಗಳು ನಿಯಮ ಉಲ್ಲಂಘನೆ ಮಾಡಿರುವುದರಿಂದ ಇಂದು ಆರ್ ಟಿ ಓ ಅಧಿಕಾರಿಗಳು ಖಾಸಗಿ ಶಾಲಾ ಬಸ್ಗಳ ಮೇಲೆ ದಾಳಿ ಮಾಡಿದ್ದಾರೆ.

ಹೌದು, ಇಂದು (ಡಿ.14) ನಗರದ ಖಾಸಗಿ ಶಾಲೆಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದು ಖಾಸಗಿ ಶಾಲೆಗಳ ಮೇಲೆ RTO ದಾಳಿ ನಡೆಸಿದೆ.

ನಗರದ ವಿವಿಧ ಖಾಸಗಿ ಶಾಲಾ ವಾಹನಗಳ ಮೇಲೆ ದಾಳಿ ನಡೆಸಿದ್ದು ನಿಯಮ ಉಲ್ಲಂಘನೆ ಮಾಡುತ್ತಿರುವ ನೂರಾರು ‌ಬಸ್ ಗಳ ವಿರುದ್ಧ ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಶೋಭಾ ನೇತೃತ್ವದಲ್ಲಿ ದಾಳಿ ನಡೆಸಿದೆ.

ದಾಳಿ ವೇಳೆ ಖಾಸಗಿ ಬಸ್ ಗಳ ನಿಯಮ ಉಲ್ಲಂಘನೆ ಖಾಸಗಿ ಶಾಲಾ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಪತ್ತೆ ಒಮ್ನಿ ವಾಹನಗಳಲ್ಲಿ ನಿಯಮಮೀರಿ ಮಕ್ಕಳನ್ನು ಪಿಕ್-ಡ್ರಾಪ್ ಮಾಡುತ್ತಿರುವ ಶಾಲೆಗಳು ನಿಯಮ ಉಲ್ಲಂಘನೆ ಮಾಡಿದ ಒಮ್ನಿ, ಬಸ್ ಗಳನ್ನು ಸೀಜ್ ಮಾಡಿದ ಅಧಿಕಾರಿಗಳು.

ಜಯನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಶಾಲೆಗಳ ಬಸ್ಗಳನ್ನ ತೀವ್ರ ತಪಾಸಣೆ ಮಾಡುತ್ತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು. ಮಕ್ಕಳಿಗೆ ಬಸ್ ಒಮ್ನಿ ವಾಹನಗಳಲ್ಲಿ ಸೇಫ್ಟಿ ಇಲ್ಲ ಅಂತ ಸಾಲು ಸಾಲು ಹೀಗಾಗಿ ವಿವಿಧ ಶಾಲೆಗಳ ಬಸ್ ಗಳನ್ನ ತಪಾಸಣೆ ಮಾಡ್ತಿರೋ ಸಾರಿಗೆ ಇಲಾಖೆ.

 

 

Related