ಹೆಚ್‌ಡಿಕೆ ವಿರುದ್ಧ ರಾಕ್‌ಲೈನ್ ಸ್ಪೋಟಕ ಆರೋಪ

ಹೆಚ್‌ಡಿಕೆ ವಿರುದ್ಧ ರಾಕ್‌ಲೈನ್ ಸ್ಪೋಟಕ ಆರೋಪ

ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕೆಂಡಕಾರಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅವರು ಆಡಿಯೋ-ವಿಡಿಯೋ ಎಂದು ಹೇಳಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ.  ಚುನಾವಣೆ ಸಂದರ್ಭದಲ್ಲಿನ ಸಿಸಿ ಟಿವಿ ದ್ಯಶ್ಯಾವಳಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, ಚುನಾವಣೆ ಸಂದರ್ಭದಲ್ಲಿ ನಾನು ಹಾಗೂ ಹಲವರು, ಸುಮಲತಾ ಎಲ್ಲರೂ ಮಂಡ್ಯದಲ್ಲಿ ಹೋಟೆಲ್‌ನಲ್ಲಿ ಇರುತ್ತಿದ್ದೆವು. ಹೋಟೆಲ್‌ನಲ್ಲಿ ನಾನು ಸುಮಲತಾ ಓಡಾಡುತ್ತಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪಡೆದು ಅದಕ್ಕೆ ಅಶ್ಲೀಲ ಚಿತ್ರ ಸೇರಿಸಿ ದುರ್ಬಳಕೆ ಪ್ಲ್ಯಾನ್ ಮಾಡಿದ್ದರು ಎಂದು ಹೇಳಿದ್ದಾರೆ.

ಸಿಸಿಟಿವಿ ದೃಶ್ಯ ದುರ್ಬಳಕೆ ಮಾಡಿಕೊಂಡು ಒಂದು ಸ್ಟೋರಿ ಮಾಡಲು ಹೊರಟಿದ್ದರು ಎಂದು ಅವರ ಚಾನಲ್‌ನಲ್ಲಿದ್ದ ಅಂಬರೀಶ್ ಅಭಿಮಾನಿಯೇ ನನಗೆ ಮಾಹಿತಿ ನೀಡಿದ್ದ. ಬಳಿಕ ಈ ಸಂದರ್ಭದಲ್ಲಿ ಇದು ಸರಿಯಲ್ಲ ಎಂದು ಪ್ಲಾö್ಯನ್ ಕೈಬಿಟ್ಟರು ಎಂಬುದಾಗಿಯೂ ತಿಳಿಸಿದ್ದ.

ಆಡಿಯೋ-ವಿಡಿಯೋ ಏನೇ ಮಾಡಿದರೂ ಇಂದಿನ ಟೆಕ್ನಾಲಜಿ ಇಷ್ಟೊಂದು ಮುಂದುವರೆದಿರುವಾಗ ಜನರು ಅದನ್ನೆಲ್ಲ ನಂಬುವುದಿಲ್ಲ. ಆದರೆ ಕುಮಾರಸ್ವಾಮಿಯವರ ಕೆಟ್ಟ ಮನಸ್ಥಿತಿ ಏನಿರಬಹುದು ? ಸಿಸಿ ಟಿವಿ ದೃಶ್ಯವನ್ನು ತಮ್ಮ ರಾಜಕಾರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲು ಹೋಗಿದ್ದಾರೆ ಎಂದರೆ ಅವರು ಅದೆಂತ ಕೀಳುಮಟ್ಟದ ರಾಜಕಾರಣಕ್ಕಿಳಿದಿದ್ದಾರೆ ಎಂದು ಗುಡುಗಿದ್ದಾರೆ.

Related