ನೀರಿಗಾಗಿ ಆಗ್ರಹಿಸಿ ಸೊಗಲಕ್ಕೆ ಬೈಕ್‌ಯಾತ್ರೆ

ನೀರಿಗಾಗಿ ಆಗ್ರಹಿಸಿ ಸೊಗಲಕ್ಕೆ ಬೈಕ್‌ಯಾತ್ರೆ

ಬೈಲಹೊಂಗಲ : ಕೊರೋನಾ ಎಂಬ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವುದರಿಂದ ಅದರ ಮುಕ್ತಕ್ಕಾಗಿ ಮತ್ತು ಕಳಸಾ ಬಂಡೂರಿ ಹಾಗೂ ಮಹಾದಾಯಿ ನೀರು ಹಂಚಿಕೆ ಬಗ್ಗೆ ನ್ಯಾಯಾಲಯ ತೀರ್ಪು ಬೇಗ ಅನುಷ್ಠಾನಗೊಳಿಸಬೇಕು ಎಂದು ನವಚೇತನ ಯುವಕ ಸಂಘದ ಮತ್ತು ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ನಲವಡೆ ನುಡಿದರು.

ತಾಲೂಕಿನ ನಯಾನಗರ ಗ್ರಾಮದ ಯುವಶಕ್ತಿಯು ಸೊಗಲ ಕ್ಷೇತ್ರದವರಿಗೆ ಶ್ರಾವಣ ಮಾಸದ ನಿಮಿತ್ಯ ಆಗಮಿಸಿದ್ದ ರಾಜಕೀಯ ಪಕ್ಷಗಳ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಇಚ್ಚಾಶಕ್ತಿ ಹಾಗೂ ಸದ್ಬುದ್ದಿ ನೀಡಲೆಂದು ಸೊಗಲ ಸೋಮೇಶ್ವರದಲ್ಲಿ ಕಳೆದ ನಾಲ್ಕು ವರ್ಷದಿಂದ ಪಾದಯಾತ್ರೆಯ ಮೂಲಕ ಪ್ರಾರ್ಥಿಸಲಾಗಿತ್ತು, ಅಶಯದಂತೆ ಘನ ನ್ಯಾಯಾಲಯವು ತೀರ್ಪು ನೀಡಿ ನಮ್ಮ ರಾಜ್ಯಕ್ಕೆ ವಿದ್ಯುತ್ ಉತ್ಪಾದನೆಗೆ 8 ಟಿ.ಎಮ್.ಸಿ ಹಾಗೂ ರೈತರಿಗೆ ಹಾಗೂ ಕುಡಿಯುವ ನೀರಿಗಾಗಿ 5.5 ಟಿ.ಎಮ್.ಸಿ ನೀಡಿರುವುದು ಸಂತಸದ ವಿಷಯ.

ಆದರೆ ಈ ವರ್ಷ ಬೈಕ್ ಯಾತ್ರೆಯ ಮೂಲಕ ಮಹಾಮಾರಿ ಮುಕ್ತಕ್ಕಾಗಿ ಮತ್ತು ಮಹಾದಾಯಿ ನೀರಿಗಾಗಿ ಆಗ್ರಹಿಸಿ ರೈತರ ಹಿತ ದೃಷ್ಠಿಯಿಂದ ಕೇಂದ್ರ ಮತ್ತು ರಾಜ್ಯದ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರ ರಾಜಕೀಯ ವೈರತ್ವ ಬಿಟ್ಟು, ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಇದನ್ನು ಬಿಟ್ಟು ರಾಜಕೀಯ ಮಾಡಿದಲ್ಲಿ ಜನರ ತಿರಸ್ಕಾರಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.

Related