ಸುರಂಗ ಮಾರ್ಗದಿಂದ 41 ಕಾರ್ಮಿಕರ ರಕ್ಷಣೆ; ಮೋದಿ ಧನ್ಯವಾದ

ಸುರಂಗ ಮಾರ್ಗದಿಂದ 41 ಕಾರ್ಮಿಕರ ರಕ್ಷಣೆ; ಮೋದಿ ಧನ್ಯವಾದ

ಕಳೆದ ಕೆಲವು ದಿನಗಳ ಹಿಂದೆ ಸುರಂಗ ಮಾರ್ಗದಲ್ಲಿ 41 ಕಾರ್ಮಿಕರು ಸಿಲುಕಿದ್ದರು ಆದರೆ ನೆನ್ನೆ ಮಂಗಳವಾರ 41 ಕಾರ್ಮಿಕರನ್ನು ಸುರಕ್ಷತೆಯಿಂದ ಹೊರಗೆ ತೆಗೆಯಲಾಗಿದೆ ಎಂದು ತಿಳಿದುಬಂದಿದೆ. 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿರುವಂತಹ ಕಾರ್ಯಚರಣೆಗಳಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದ ತಿಳಿಸಿದ್ದಾರೆ.

ಹೌದು, ಸಿಲ್ಕ್ಯಾರಾ ಸುರಂಗ ದಿಂದ ರಕ್ಷಿಸಲ್ಪಟ್ಟ 41 ಕಾರ್ಮಿಕರೊಂದಿಗೆ ದೂರವಾಣಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. ಒಂದೇ ಕಡೆಯಿದ್ದ ಎಲ್ಲಾ ಕಾರ್ಮಿಕರ ಬಳಿ ಮಾತನಾಡಿ, ಆರೋಗ್ಯ ವಿಚಾರಿಸಿದರು. ನವೆಂಬರ್ 12 ರಂದು ಉತ್ತರ ಕಾಶಿಯ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದಿತ್ತು, ಅದರೊಳಗೆ 41 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು. ಸತತ ಪ್ರಯತ್ನದ ಬಳಿಕ 17 ದಿನಗಳ ನಂತರ ಈ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಕಾರ್ಮಿಕರನ್ನು ಸ್ಥಳಾಂತರಿಸಿದ ಕೂಡಲೇ ಪ್ರಧಾನಿ ಮೋದಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ, ಉತ್ತರಕಾಶಿಯಲ್ಲಿ ಕಾರ್ಮಿಕ ಸಹೋದರರ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನು ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಹಾಗೂ ತಾಳ್ಮೆ ಎಲ್ಲರಿಗೂ ಸ್ಫೂರ್ತಿ, ನೀವೆಲ್ಲರೂ ದೀರ್ಘಕಾಲ ಆರೋಗ್ಯವಾಗಿರಿ. ದೀರ್ಘಾವಧಿಯ ಕಾಯುವಿಕೆಯ ಬಳಿಕ ನೀವು ನಿಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗಿರುವುದು ತುಂಬಾ ತೃಪ್ತಿದಾಯಕ ಸಂಗತಿ ಎಂದು ಬರೆದಿದ್ದಾರೆ.

Related