ರೈತರಿಗೆ ಹಾಲು ಖರೀದಿ ದರ ಕಡಿತ!

ರೈತರಿಗೆ ಹಾಲು ಖರೀದಿ ದರ ಕಡಿತ!

ತುಮಕೂರು : ರೈತರಿಂದ ಖರೀದಿಸುವ ಹಾಲಿನ ದರದಲ್ಲಿ 2 ರೂ. ಕ ಡಿತ ಮಾಡಿ ತುಮಕೂರು ಹಾಲು ಒಕ್ಕೂಟ ಆದೇಶ ಹೊರಡಿಸಿದೆ. ಜೂ.8ರಿಂದ ಜಾರಿಯಾಗುವಂತೆ ಪ್ರತಿ ಲೀಟರ್ ಹಾಲಿಗೆ ಖರೀದಿ ದರ 2ರೂ. ಕಡಿತವಾಗಿದ್ದು, ಕೊರೋನಾ ಹಿನ್ನೆಲೆ ಸಂಕಷ್ಟದಲ್ಲಿರುವ ತುಮಕೂರು ಜಿಲ್ಲೆಯಲ್ಲಿನ ಹಾಲು ಉತ್ಪಾದಕರ ಮೇಲೆ ಮತ್ತಷ್ಟು ಬರೆ ಎಳೆದಂತಾಗಿದೆ.

ಕೊರೋನಾ ಲಾಕ್‌ಡೌನ್ ಹಿನ್ನೆಲೆ ಮಾರುಕಟ್ಟೆ ಕಳೆದುಕೊಂಡಿರುವ ತುಮಕೂರು ಹಾಲು ಉತ್ಪಾದಕರ ಸಂಗಳ ಒಕ್ಕೂಟ ನಷ್ಟದಿಂದ ಪಾರಾಗಲು ರೈತರಿಂದ ಖರೀದಿ ಮಾಡುತ್ತಿರುವ ಹಾಲಿನ ದರವನ್ನು 2ರೂ. ಕಡಿತಗೊಳಿಸಿದೆ. ತುಮುಲ್‌ನಲ್ಲಿ ಪ್ರತಿದಿನ 8.16 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, 4.46ಲಕ್ಷ ಕೆಜಿಗೆ ಪ್ರಸ್ತುತ ಮಾರುಕಟ್ಟೆಯಿದ್ದು ಉಳಿದ ಹಾಲು ನಷ್ಟ ತಂದೊಡ್ಡಿದೆ.

ಪ್ರಸ್ತುತ ಒಕ್ಕೂಟಕ್ಕೆ ಆಗುತ್ತಿರುವ ನಷ್ಟ ತಪ್ಪಿಸುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರ ಕಡಿಮೆ ಮಾಡಲಾಗಿದೆ, ಹಾಲು ಉತ್ಪಾದಕರು ಸರ್ಕಾರ ಸೂಚಿಸಿರುವ ಕೊರೋನಾ ಮಾರ್ಗಸೂಚಿ ಅನುಸರಿಸಿಕೊಂಡು ಸಂಗಳಿಗೆ ಹಾಲು ಹಾಕಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹಾಲು ಉತ್ಪಾದಕರಲ್ಲಿ ಕೋರಿದ್ದಾರೆ.

ಪ್ರತಿದಿನ 4.16 ಲಕ್ಷ ಕೆಜಿ ಹಾಲನ್ನು ಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳಿಗೂ ಮಾರುಕಟ್ಟೆ ಇಲ್ಲವಾಗಿದ್ದು 80 ಕೋಟಿ ರೂ. ಮೌಲ್ಯದ 2200 ಮೆಟ್ರಿಕ್ ಟನ್ ಹಾಲಿನಪುಡಿ ಹಾಗೂ 1500 ಮೆಟ್ರಿಕ್‌ಟನ್ ಬೆಣ್ಣೆ ಮಾರಾಟವಾಗದೆ ಗೋದಾಮಿನಲ್ಲಿಯೇ ಉಳಿದಿದೆ. ಹೆಚ್ಚುವರಿ ಹಾಲನ್ನು ಪುಡಿಯಾಗಿ ಪರಿವರ್ತಿಸಲು ತಗುಲುವ ಸಾಗಾಣಿಕೆ, ಪರಿವರ್ತನೆ ಹಾಗೂ ದಾಸ್ತಾನು ವೆಚ್ಚ ಒಕ್ಕೂಟಕ್ಕೆ ಹೊರೆಯಾಗುತ್ತಿದೆ ಎಂದು ರೈತರಿಂದ ಖರೀದಿಸುವ ಹಾಲಿನ ದರ ಕಡಿತ ಮಾಡಲು ತುಮುಲ್ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಿಬ್ಬಂದಿ, ಸದಸ್ಯರಿಗೆ ಪರಿಹಾರ: ಸಹಜ ಮರಣಕ್ಕೆ ತುತ್ತಾಗುವ ಹಾಲು ಉತ್ಪಾದಕರ ಸಂದ ಸದಸ್ಯರು ಹಾಗೂ ಸಿಬ್ಬಂದಿಗೆ ತುಮುಲ್ ವತಿಯಿಂದ ನೀಡಲಾಗುತ್ತಿರುವ 50 ಸಾವಿರ ರೂ.ಮರಣ ಪರಿಹಾರಧನದ ಪ್ರಮಾಣ ಹೆಚ್ಚಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಮೃತಪಟ್ಟರೆ 1 ಲಕ್ಷ ರೂ. ಪರಿಹಾರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಕ್ಕೂಟದ 2770 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೂ ಮಾಸ್ಕ್, ಸ್ಯಾನಿಟೈಸರ್, ಫೇಸ್‌ಶೀಲ್ಡ್, ಗ್ಲೌಸ್ ಅನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

Related