ಶೀಘ್ರದಲ್ಲೇ ಸಾರಿಗೆ ಇಲಾಖೆಯಲ್ಲಿ 9000 ಸಾವಿರ ನೇಮಕಾತಿ: ಸಚಿವ ರಾಮಲಿಂಗ ರೆಡ್ಡಿ!

ಶೀಘ್ರದಲ್ಲೇ ಸಾರಿಗೆ ಇಲಾಖೆಯಲ್ಲಿ 9000 ಸಾವಿರ ನೇಮಕಾತಿ: ಸಚಿವ ರಾಮಲಿಂಗ ರೆಡ್ಡಿ!

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದಲ್ಲಿರುವ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.

ಅವರು ನಿನ್ನೆ ಹುಬ್ಬಳ್ಳಿಯಲ್ಲಿಗೋಕುಲ್ ರಸ್ತೆಯ ಬಸ್‌ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಧಾರವಾಡ ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣದ ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ್‌ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

2016 ರಲ್ಲೂ ಕೂಡ ನಾನು ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ್ದೆ ಆಗ ಮಾತ್ರ ಕೆಎಸ್ಆರ್ಟಿಸಿ ಕಾರ್ಯನಿರ್ವಹಿಸಲು ಕಂಡಕ್ಟರ್ ಮತ್ತು ಡ್ರೈವರನ್ನು ನೇಮಕಾತಿ ಮಾಡಿದ್ದೆವು. ಅದಾದ ನಂತರ ರಾಜ್ಯದಲ್ಲಿ ಮತ್ತೆ ರಿಕ್ವೈರ್ಮೆಂಟನ್ನು ಯಾವುದೇ ಕಾರಣಕ್ಕೂ ಮಾಡಿರಲಿಲ್ಲ ಆದರೆ ಮತ್ತೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ಈಗ ಸುಮಾರು 9000 ಸಿಬ್ಬಂದಿಗಳನ್ನು ನಾವು ನೇಮಕಾತಿ ಮಾಡಬೇಕೆಂದು ಆದೇಶ ಹೊರಡಿಸಿದ್ದೇವೆ.

ಇನ್ನು ರಾಜ್ಯದಲ್ಲಿ 5800 ಬಸ್ಸುಗಳು ಮತ್ತೆ ರಾಜ್ಯಕ್ಕೆ ಬಿಡುಗಡೆಯಾಗಲಿದೆ ಎಂದು ಈ ಸಂದರ್ಭದಲ್ಲಿ ಸಚಿವ ರಾಮ್ಲಿಂಗ ರೆಡ್ಡಿ ಅವರು.

ಕರ್ನಾಟಕ ರಾಜ್ಯದಲ್ಲಿ ನಮ್ಮ ಬೆಂಗಳೂರು ಹೊರತೂಪಡಿಸಿದರೆ ಅತಿ ದೊಡ್ಡ ಬಸ್ ನಿಲ್ದಾಣ ಎಂದರೆ ಅದು ಹುಬ್ಬಳ್ಳಿಯ ಬಸ್ ನಿಲ್ದಾಣ, ಹಾಗಾಗಿ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ಇನ್ನು ಶಕ್ತಿ ಯೋಜನೆ ಆರಂಭಗೊಂಡಾಗ 84 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಈಗ 1 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿದಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 884 ಹೊಸ ಬಸ್‌ಗಳನ್ನು ‘ಪೂರೈಸಲಾಗುತ್ತದೆ. ಅದರಲ್ಲಿ 100 ಎಲೆಕ್ನಿಕ್ ಬಸ್‌ಗಳನ್ನು ಹುಬ್ಬಳ್ಳಿ -ಧಾರವಾಡ ನಗರ ಸಂಚಾರಕ್ಕೆ ನೀಡಲಾಗುತ್ತದೆ. ಉಳಿದ 784 ಬಸ್‌ಗಳು ಫೆಬ್ರವರಿ ಕೊನೆಯಲ್ಲಿ ಬರಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಮಾತನಾಡಿ, 13 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. 23 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಹೊಸ ಬಸ್‌ ನಿಲ್ದಾಣವನ್ನು ನವೀಕರಣಗೊಳಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.

 

Related